»   » ‘ಪ್ರೀಪ್ರೇಪ್ರ’ದ ಪ್ರಸವ ಪರದಾಟ

‘ಪ್ರೀಪ್ರೇಪ್ರ’ದ ಪ್ರಸವ ಪರದಾಟ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಹೊಸತನದ ತುಡಿತವಿರುವ ಕವಿತಾ ಲಂಕೇಶ್‌ ನಿರ್ದೇಶನದ ಲೇಟೆಸ್ಟ್‌ ಸಿನಿಮಾ ‘ಪ್ರೀತಿ ಪ್ರೇಮ ಪ್ರಣಯ’ದ ಹಾಡುಗಳು ರಿಲಯನ್ಸ್‌ ಮೊಬೈಲ್‌ನಲ್ಲೀಗ ಗುನುಗುನುಸುತ್ತಿವೆ. ಹೀಗೆ ರಿಲಯನ್ಸ್‌ ಮೊಬೈಲಿನಲ್ಲಿ ಕೇಳುತ್ತಿರುವ ಮೊದಲ ಕನ್ನಡ ಚಿತ್ರದ ಹಾಡುಗಳಿವು.

ರಿಲಯನ್ಸ್‌ ಮೊಬೈಲ್‌ ವಲಯದ ಕನ್ನಡ ವಿಭಾಗದ ಅಧಿಕಾರಿ ಎ.ರವಿ ತಮ್ಮ ಕಂಪನಿಯ ಮೊಬೈಲುಗಳಲ್ಲಿ ಕನ್ನಡ ಹಾಡು ಕೇಳುತ್ತಿರುವುದಕ್ಕೆ ಆನಂದ ತುಂದಿಲರಾಗಿದ್ದರು. ‘ಪ್ರೀಪ್ರೇಪ್ರ’ದ ಹಾಡುಗಳಲ್ಲಿ ಹೊಸತನವಿದೆ. ಯುವಕರ ನಾಡಿಮಿಡಿತವಿದೆ. ಎಲ್ಲಾ ಜನರೇಷನ್ನಿಗೆ ತಕ್ಕಂಥ ಟೇಸ್ಟಿದೆ. ಇಂಥ ಅರ್ಥಪೂರ್ಣ ಹಾಗೂ ಕ್ಲಾಸಿ ಕನ್ನಡ ಹಾಡುಗಳನ್ನು ಮೊಬೈಲ್‌ ಮೂಲಕ ತಲುಪಿಸುವುದಕ್ಕೆ ಸಂತೋಷವಾಗುತ್ತದೆ. ರಿಲಯನ್ಸ್‌ ಮೊಬೈಲ್‌ನ ಹ್ಯಾಂಡ್‌ಸೆಟ್‌ಗಳಲ್ಲಿ ‘ಪ್ರೀಪ್ರೇಪ್ರ’ದ ಹಾಡುಗಳನ್ನು ಕೇಳುವುದಷ್ಟೇ ಅಲ್ಲ, ನೋಡಲೂಬಹುದು ಎಂದು ರವಿ ಹೇಳಿದರು.

ಒಂದು ಕಡೆ ಆಡಿಯೋ ಕ್ಯಾಸೆಟ್ಟುಗಳ ಭರ್ಜರಿ ಬಿಕರಿ. ಇನ್ನೊಂದು ಕಡೆ ಟೀವಿ ಚಾನೆಲ್ಲುಗಳ ಟಾಪ್‌ ಟೆನ್‌ ಕಾರ್ಯಕ್ರಮದಲ್ಲಿ ‘ಪ್ರೀಪ್ರೇಪ್ರ’ ಯಶಸ್ಸಿನ ಸೋಪಾನಗಳನ್ನು ಏರುತ್ತಿರುವುದರ ನಡುವೆ ಇನ್ನೊಂದು ಬೋನಸ್‌ ಕವಿತಾರನ್ನು ಹುಡುಕಿಕೊಂಡು ಬಂದಿದೆ. ತೆಲುಗು ನಿರ್ಮಾಪಕರೊಬ್ಬರು ‘ಪ್ರೀಪ್ರೇಪ್ರ’ವನ್ನು ರೀಮೇಕ್‌ ಮಾಡಲು ಅನುಮತಿ ಕೇಳಿದ್ದಾರೆ. ಕನ್ನಡದವರು ಪರ ಭಾಷಾ ಚಿತ್ರಗಳ ಸರಕನ್ನು ಎರವಲು ತರುತ್ತಿರುವ ಇವತ್ತಿನ ಸಿನಿಮಾ ಜಾಯಮಾನದಲ್ಲಿ ಇಂತಹ ಬೆಳವಣಿಗೆ ಮೆಚ್ಚತಕ್ಕದ್ದೇ.

ಇಷ್ಟೆಲ್ಲ ಸದ್ದು ಮಾಡುತ್ತಿದ್ದರೂ ಥಿಯೇಟರ್‌ ಗಿಟ್ಟಿಸಿಕೊಳ್ಳಲು ಪರದಾಟ ನಡೆಸಿ ಹೈರಾಣಾಗಿರುವ ಕವಿತಾ ಲಂಕೇಶ್‌ ಚಲನಚಿತ್ರ ವಾಣಿಜ್ಯ ಮಂಡಳಿ ನಡಾವಳಿ ವಿಷಯದಲ್ಲಿ ಸುಸ್ತಾಗಿದ್ದಾರೆ. ಕಳೆದ ವಾರವೇ ‘ಪ್ರೀಪ್ರೇಪ್ರ’ವನ್ನು ತೆರೆಗೆ ತರಲು ನಡೆಸಿದ ಯತ್ನಗಳು ವಿಫಲವಾಗಿವೆ. ಜುಲೈ 18ನೇ ತಾರೀಕಾದರೂ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ಕವಿತಾ ಸಂಕಲ್ಪ.

ಆಲ್‌ ದಿ ಬೆಸ್ಟ್‌ ಕವಿತಾ.

Post your views

ಇನ್ನಷ್ಟು ಓದಿಗೆ-
ಪ್ರೀಪ್ರೇಪ್ರ-ಪ್ರಶಸ್ತಿ ಭಾಜಕರ ಬಹುಪರಾಕ್‌
ಜೂ.4ಕ್ಕೆ ‘ಪ್ರೀಪ್ರೇಪ್ರ’ ಧ್ವನಿಸುರುಳಿ ಬಿಡುಗಡೆ
ಸಿಂಗಾಪೂರ್‌ ಸುತ್ತಿಬಂದ ‘ಪ್ರೀಪ್ರೇಪ್ರ’ ಟೀಂ
ಪ್ರೀತಿ ಪ್ರೇಮ ಪ್ರಣಯಕ್ಕೆ ಅವಾರ್ಡ್‌ ಬರುತ್ತೆ- ಕವಿತಾ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada