»   » ಶುಕ್ರವಾರ ‘ಮಸಾಲ’ ಸ್ಪೇಷಲ್‌!

ಶುಕ್ರವಾರ ‘ಮಸಾಲ’ ಸ್ಪೇಷಲ್‌!

Subscribe to Filmibeat Kannada

ಪಡ್ಡೆ ಹುಡುಗರ ನಿದ್ರೆ ಕೆಡಿಸಿರುವ ‘ಮಸಾಲ’ ಚಿತ್ರ ಶುಕ್ರವಾರ(ಜು.08) ತೆರೆಕಾಣುತ್ತಿದೆ. ಚಿತ್ರದ ಶೇ.50ಕ್ಕೂ ಹೆಚ್ಚು ಭಾಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸೆನ್ಸಾರ್‌ ಮಂಡಳಿ, ಕಡೆಗೆ ‘ಎ’ ಮತ್ತು ‘ಯು’ ಪ್ರಮಾಣ ಪತ್ರ ನೀಡಿ ಕೈತೊಳೆದು ಕೊಂಡಿದೆ. ದುರದೃಷ್ಟ ವೆಂದರೆ ಸೆನ್ಸಾರ್‌ ಪ್ರಮಾಣ ಪತ್ರವನ್ನು ಚಿತ್ರದ ಜಾಹಿರಾತಿಗೆ ಪೂರಕವಾಗಿ ಬಳಸಿಕೊಳ್ಳಲಾಗುತ್ತಿದೆ(‘A ಫಿಲಂ ಫಾರ್‌ U’).

‘ನೀವೂ ಬ್ಯಾಸ್ಕೆಟ್‌ ಬಾಲ್‌ ಆಡ್ತೀರಾ.. .?’ ಎಂಬ ಶೀರ್ಷಿಕೆಯ ಮೂಲಕ ಪಡ್ಡೆಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಚಿತ್ರದ ಸ್ಟಿಲ್‌ಗಳನ್ನು ಕಂಡು ಗಾಭರಿಗೊಂಡಿರುವ ಗಾಂಧಿನಗರ ಕಾತರದಿಂದ ಚಿತ್ರವನ್ನು ನಿರೀಕ್ಷಿಸುತ್ತಿದೆ.

ಗುಡ್‌ಲಕ್‌, ಆಟೋಶಂಕರ್‌ ಚಿತ್ರಗಳ ಸ್ಟಿಲ್‌ಗಳಲ್ಲಿ ರಾಧಿಕಾರ ಬಿಚ್ಚಮ್ಮನ ಅವತಾರ ಈಗಾಗಲೇ ಜಾಹಿರಾಗಿದೆ. ಅದರ ಮುಂದುವರೆದ ಭಾಗದಂತಿರುವ ‘ಮಸಾಲ’ ಬಗ್ಗೆ ನಿರ್ಮಾಪಕರಿಗೆ ಅಪಾರ ನಿರೀಕ್ಷೆ.

‘ಇದು ಥ್ರಿಲ್‌, ಕಾಮಿಡಿ, ರೋಮ್ಯಾಂಟಿಕ್‌ ಮತ್ತು ಸೆಂಟಿಮೆಟಲ್‌ ಚಿತ್ರ’ ಎಂದು ಬಣ್ಣಿಸಿರುವ ನಿರ್ದೇಶಕ ದಯಾಳ್‌, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ನಡೆಸಿರುವ ಮಸಾಲ ತಂತ್ರಗಳು ಎಷ್ಟರ ಮಟ್ಟಿಗೆ ಫಲಿಸಲಿವೆ ಕಾದು ನೋಡಬೇಕು.

‘ಬಾ ಬಾರೋ ರಸಿಕ’ ಕುಖ್ಯಾತಿಯ ಸುನಿಲ್‌ ರಾವ್‌, ರಾಧಿಕಾ, ವಿಶಾಲ್‌ ಹೆಗಡೆ, ಸಂಧ್ಯಾ, ನಾಗಶೇಖರ್‌ ತಾರಾಗಣದಲ್ಲಿದ್ದು, ಸಾಧುಕೋಕಿಲಾ ಸಂಗೀತ ನೀಡಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada