»   » 5000 ವಿದ್ಯಾರ್ಥಿಗಳಿಗೆ ರಾಜ್‌ರಿಂದ ಪರಿಸರ ದೀಕ್ಷೆ

5000 ವಿದ್ಯಾರ್ಥಿಗಳಿಗೆ ರಾಜ್‌ರಿಂದ ಪರಿಸರ ದೀಕ್ಷೆ

Subscribe to Filmibeat Kannada

ಬೆಂಗಳೂರು : ನಾನು ರೈತರ ಮಗ. ಒಂದು ಕಾಲದಲ್ಲಿ ಬೇಸಾಯ ಮಾಡಿ ಆನಂದಪಟ್ಟಿದ್ದೆ...ಪರಿಸರವೇ ಅಪ್ಪ, ಅಮ್ಮ, ಬಂಧು ಬಳಗ ಎಲ್ಲಾ ಆಗಬೇಕು ಎಂದು ನಟ ರಾಜ್‌ಕುಮಾರ್‌ ಅಭಿಪ್ರಾಯಪಟ್ಟರು.

ವಿಶ್ವಪರಿಸರ ದಿನದ ಅಂಗವಾಗಿ ನಗರದ ಸಜ್ಜನರಾವ್‌ ವೃತ್ತದಲ್ಲಿ ಬಸವನಗುಡಿಯ ಪ್ರಜಾ ಪರಿಸರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 21 ಶಾಲೆ ಮತ್ತು ಏಳು ಕಾಲೇಜುಗಳ 5000ಮಂದಿ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ರಾಜ್‌ಕುಮಾರ್‌ ಸಸಿ ವಿತರಿಸಿ, ಪರಿಸರ ಪ್ರೀತಿಯನ್ನು ಜಾಗೃತಗೊಳಿಸಿದರು.

ಬಸವನಗುಡಿ ಶಾಸಕ ಕೆ.ಚಂದ್ರಶೇಖರ್‌ ಮಾತನಾಡಿ, ಶಾಂತಿದೂತ ರಾಜ್‌ಕುಮಾರ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದು ನಿಜಕ್ಕೂ ಬಸವನಗುಡಿಯ ಪುಣ್ಯ. ಬಸವನಗುಡಿಯನ್ನು ಹಸಿರುವಲಯವನ್ನಾಗಿ ಪರಿವರ್ತಿಸುವುದಾಗಿ ಘೋಷಿಸಿದರು.

ಪಾರ್ವತಮ್ಮ ರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada