»   » ಖ್ಯಾತ ನಿರ್ಮಾಪಕ, ಮಾಜಿ ಸಚಿವ ಎಸ್‌.ರಮೇಶ್‌ ಇನ್ನಿಲ್ಲ

ಖ್ಯಾತ ನಿರ್ಮಾಪಕ, ಮಾಜಿ ಸಚಿವ ಎಸ್‌.ರಮೇಶ್‌ ಇನ್ನಿಲ್ಲ

Subscribe to Filmibeat Kannada

ಬೆಂಗಳೂರು : ಮಾಜಿ ಸಚಿವ, ಕನ್ನಡ ಚಲನಚಿತ್ರ ನಿರ್ಮಾಪಕ ಎಸ್‌.ರಮೇಶ್‌, ನಗರದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶುಕ್ರವಾರ(ಜು.7) ಬೆಳಗ್ಗೆ ನಿಧನರಾದರು.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕಳೆದ ಕೆಲವು ತಿಂಗಳಿಂದ ಅಸ್ವಸ್ಥರಾಗಿದ್ದರು. ವೈದ್ಯಕೀಯ ಸೌಲಭ್ಯಗಳು ಅವರನ್ನು ಈವರೆಗೆ ಜೀವಂತವಾಗಿ ಉಳಿಸಿದ್ದವು. ಪತ್ನಿ ಹೇಮಲತಾ, ಪುತ್ರಿ ಮತ್ತು ಪುತ್ರನನ್ನು ರಮೇಶ್‌ ಅಗಲಿದ್ದಾರೆ. ಅವರ ನಿಧನಕ್ಕೆ ನಾಡಿನ ಗಣ್ಯರು ಮತ್ತು ಕನ್ನಡ ಚಿತ್ರೋದ್ಯಮ ಕಂಬನಿ ಮಿಡಿದಿದೆ.

ಎಸ್‌. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ವಾರ್ತಾ ಸಚಿವರಾಗಿ ರಮೇಶ್‌ ಕಾರ್ಯನಿರ್ವಹಿಸಿದ್ದರು.

‘ತಂದೆಗೆ ತಕ್ಕ ಮಗ’, ‘ರವಿವರ್ಮ’ ,‘ಚೆಲುವ’ ಮತ್ತಿತರ ಚಿತ್ರಗಳ ನಿರ್ಮಾಣದ ಮೂಲಕ ಅವರು, ಚಿತ್ರರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಪುತ್ರ ಪವನ್‌ಕುಮಾರ್‌ರನ್ನು ಇತ್ತೀಚೆಗಷ್ಟೇ ನಿರ್ಮಾಪಕರಾಗಿ ಚಿತ್ರರಂಗಕ್ಕೆ ರಮೇಶ್‌ ಪರಿಚಯಿಸಿದ್ದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada