»   » ಮಲಯಾಳಂ ಚಿತ್ರದಲ್ಲಿ ಸಂಜನಾ! ಪ್ಲೀಸ್, ಅಪಾರ್ಥ ಬೇಡ...

ಮಲಯಾಳಂ ಚಿತ್ರದಲ್ಲಿ ಸಂಜನಾ! ಪ್ಲೀಸ್, ಅಪಾರ್ಥ ಬೇಡ...

Posted By:
Subscribe to Filmibeat Kannada


ಸಂಜನಾ ಅಂದ್ರೆ, ಮುಂಗಾರು ಮಳೆಯ ಸಂಜನಾ ಗಾಂಧಿನಾ ಅನ್ತಾರೆ ಕನ್ನಡದ ಹುಡುಗರು! ಅವರು ರೋಚಕ ಸುಂದರಿ ಮಲ್ಲಿಕಾ ಶೆರಾವತ್ ನಾಚುವಂತೆ ಗಂಡ ಹೆಂಡತಿಯಲ್ಲಿ ಅಭಿನಯಿಸಿದ ಸಂಜನಾ ಎನ್ನುವ ದಿಟ್ಟೆಯನ್ನು ಮರೆತುಬಿಟ್ಟಿದ್ದಾರೆ!

ಇನ್ನೇನು ಎಲ್ಲರೂ ಮರೆತರು ಎನ್ನುವಾಗಲೇ, ಸಂಜನಾ ಎದ್ದು ನಿಂತಿದ್ದಾರೆ! ಅವರೀಗ ಮಲಯಾಳಂ ಚಿತ್ರಕ್ಕೆ ಸಹಿ ಹಾಕಿದ್ದಾರೆ! ಮಲಯಾಳಂ ಎಂದರೆ ದೇವರಚಿತ್ರ(?)ವಿರಬೇಕು ಎನ್ನುವ ನಿಮ್ಮ ಊಹೆ, ನೂರಕ್ಕೆ ನೂರು ಸುಳ್ಳು! ಅವರು ನಟಿಸುತ್ತಿರುವುದು ಪ್ರತಿಷ್ಠಿತ ಬ್ಯಾನರ್‌ನ ಚಿತ್ರದಲ್ಲಿ. ರಂಜಿತ್ ನಿರ್ದೇಶನದ ಈ ಚಿತ್ರದ ನಾಯಕ ಮೋಹನ್ ಲಾಲ್.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜನಾ, ನನ್ನ ತಾಳ್ಮೆ ಮತ್ತು ಸಹನೆಗೆ ಫಲ ಸಿಕ್ಕಿದೆ. ಕೊನೆಗೂ ಒಳ್ಳೆಯ ಪಾತ್ರ ಸಿಕ್ಕಿದೆ. ಈ ಚಿತ್ರ ನನ್ನ ವೃತ್ತಿ ಬದುಕಿಗೊಂದು ತಿರುವು. ಜುಲೈ ಅಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದಿದ್ದಾರೆ.

ಗಂಡ ಹೆಂಡತಿ ನಂತರ ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ ಎಂದು ಭಾವಿಸಿದ್ದ ಸಂಜನಾ ಲೆಕ್ಕಾಚಾರ ಉಲ್ಟಾಪಲ್ಟಾ ಆಯಿತು. ಸ್ಯಾಂಡಲ್ ವುಡ್ ಇನ್ನೂ ಚುಂಬನ ಸುಂದರಿಯರ ಒಪ್ಪುವ ಸ್ಥಿತಿ ತಲುಪಿಲ್ಲ ಎಂಬುದು ಅವರಿಗೆ ಮನವರಿಕೆಯಾಯಿತು. ಕೊನೆಗೂ ಬುದ್ಧಿ ಬಂದಿದೆ.

ಚಿತ್ರ ಬಿಡುಗಡೆಗೂ ಮುನ್ನ ಗಂಡ ಹೆಂಡತಿ ಬಗ್ಗೆ ಹೆಮ್ಮೆಯಿಂದ, ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದ ಅವರ ಬಾಯಲ್ಲಿ ಮಾತು ಬಂದ್ ಆದದ್ದನ್ನು ಪತ್ರಕರ್ತರು ಕಂಡಿದ್ದಾರೆ. ಸಂಜನಾ ಈಗ ಹೇಳುತ್ತಾರೆ; ನಾನು ಗಂಡ ಹೆಂಡತಿ ಚಿತ್ರದಲ್ಲಿ ಅಭಿನಯಿಸಬಾರದಿತ್ತು...!

ಸಂಜನಾ ಬಗ್ಗೆ ಇನ್ನಷ್ಟು :
ತನುತನುವಿನಲೂ ಮಜವೊಂದೇ ನಿಜ!
‘ಗಂಡ ಹೆಂಡತಿ’ ಚಿತ್ರಪಟಗಳು
ಬೆಡ್‌ ರೂಮ್‌ ಸನ್ನಿವೇಶದಲ್ಲಿ ಸ್ವಲ್ಪ ಇರುಸು ಮುರುಸಾಯಿತು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada