»   » ಜೈಲು ತಪ್ಪಿಸಿ :ಸುಪ್ರೀಂಕೋರ್ಟ್ ಮುಂದೆ ಸಂಜಯ್ ದತ್

ಜೈಲು ತಪ್ಪಿಸಿ :ಸುಪ್ರೀಂಕೋರ್ಟ್ ಮುಂದೆ ಸಂಜಯ್ ದತ್

Posted By:
Subscribe to Filmibeat Kannada


ನವದೆಹಲಿ, ಆಗಸ್ಟ್ 07 : ಟಾಡಾ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ, ಬಾಲಿವುಡ್ ನಟ ಸಂಜಯ್ ದತ್ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆಜಾಮೀನು ನೀಡುವಂತೆ ನ್ಯಾಯಾಲಯವನ್ನು ಅವರು ಕೋರಿದ್ದಾರೆ.

1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, 6ವರ್ಷಗಳ ಜೈಲು ಶಿಕ್ಷೆಗೆ ಸಂಜಯ್ ದತ್ ಗುರಿಯಾಗಿದ್ದು, ಪುಣೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮತ್ತೊಂದು ಕಡೆ ಅಭಿಮಾನಿಗಳು ಸಂಜಯ್ ದತ್ ರ ಬೆಂಬಲಿಸಿದ್ದಾರೆ. ಅಭಿಮಾನಿಗಳು www.petitioonline.comಲ್ಲಿ ಸಂಜಯ್ ಬಿಡುಗಡೆಗೆ ಒತ್ತಾಯಿಸಿ ಅಭಿಯಾನ ಆರಂಭಿಸಿದ್ದಾರೆ. ಜೊತೆಗೆ ಸಂಜಯ್ ಅಭಿಮಾನಿಗಳು www.boletoh.com ಆರಂಭಿಸಿದ್ದಾರೆ.

ಜೈಲಿನಲ್ಲಿದ್ದರೂ ಸಂಜಯ್ ದತ್ ಆರಾಮವಾಗಿ ಸಿಗರೇಟ್ ಸೇದಲು ಸಾಧ್ಯವಿದೆ. ಜೈಲಿನಲ್ಲಿ ಸಿಗರೇಟ್ ಸೇವನೆಗೆ ನಿರ್ಬಂಧವಿಲ್ಲ. ಹೀಗಾಗಿ ಇತರೆ ಕೈದಿಗಳಂತೆ ಸಂಜಯ್ ಸಹಾ ಸಿಗರೇಟ್ ಸೇದಬಹುದು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada