»   » ಗುಬ್ಬಿ ವೀರಣ್ಣರ ಮೊಮ್ಮಗಳು ಸುಷ್ಮಾ ನಾಟಕ ಆಡ್ತಾರಂತೆ!

ಗುಬ್ಬಿ ವೀರಣ್ಣರ ಮೊಮ್ಮಗಳು ಸುಷ್ಮಾ ನಾಟಕ ಆಡ್ತಾರಂತೆ!

Posted By:
Subscribe to Filmibeat Kannada


ಟೀವಿ ಸೀರಿಯಲ್ಲು ಮತ್ತು ಸಿನಿಮಾದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಗುಬ್ಬಿ ವೀರಣ್ಣನವರ ಮೊಮ್ಮಗಳು ಸುಷ್ಮಾ, ಈಗ ಸುಷ್ಮಾ ವೀರ್ ಆಗಿದ್ದಾರೆ! ವೀರ್ ಅಂದರೆ ಏನು ಗೊತ್ತೆ? ಗುಬ್ಬಿ ವೀರಣ್ಣನವರ ಶಾರ್ಟ್ ನೇಮ್!? ವೀರಣ್ಣನವರ ಆತ್ಮಕ್ಕೆ ಶಾಂತಿ ಸಿಗಲಿ..

ಆ ವಿಷಯ ಬಿಡಿ. ಸುಷ್ಮಾ ಮತ್ತೆ ಬಂದಿದ್ದಾರೆ. ಸೀರಿಯಲ್, ವಿಡಿಯೋ ಆಲ್ಬಂ, ಸಿನಿಮಾ, ಹೋಟೆಲ್ ಎನ್ನುತ್ತಿದ್ದ ಇವರು ಏಕಾಏಕಿ ರಂಗಭೂಮಿಗೆ ಹಾರಿದ್ದಾರೆ. ರಂಗ ನಿರ್ದೇಶಕ ಮಹೇಶ್ ದತ್ತಾನಿ ಮತ್ತು ನಟ ರೂಬಿ ಚಕ್ರವರ್ತಿ ಕೈ ಜೋಡಿಸಿದ್ದಾರೆ. ಕಥಾಕರ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ತಮ್ಮ ಸಂಸ್ಥೆಯ ಮೊದಲ ಪ್ರಯೋಗ ಸೆ.15ರಂದು ಎಂ.ಜಿ.ರಸ್ತೆಯ ಪಾರ್ಕ್ ಹೋಟೆಲ್ ನಲ್ಲಿ ಪ್ರದರ್ಶನ ಆಗಲಿದೆ. ಆ ನಾಟಕದ ಹೆಸರು ಸೆವೆನ್ ಸ್ಪೆಪ್ಸ್ ಅರೌಂಡ್ ದಿ ಫೈರ್. ದತ್ತಾನಿ ನಿರ್ದೇಶಕ, ಸುಷ್ಮಾ ಮತ್ತು ರೂಬಿ ಚಕ್ರವರ್ತಿ ಮುಖ್ಯ ಪಾತ್ರದಲ್ಲಿದ್ದಾರೆ. ಇದು ಇಂಗ್ಲಿಷ್ ನಾಟಕವಾದರೂ ಬೆಂಗಳೂರು ಮತ್ತು ಕನ್ನಡ ಸಂಸ್ಕೃತಿ ಎತ್ತಿ ತೋರಿಸುವ ಅಂಶ ನಾಟಕದಲ್ಲಿದೆ ಎನ್ನುತ್ತಾರೆ ಸುಷ್ಮಾ.

ಹಾಗಾದರೆ ಕನ್ನಡದಲ್ಲೇಕೆ ಈ ನಾಟಕ ಆಡುವುದಿಲ್ಲ ಎಂದರೆ ಸುಷ್ಮಾ ಉತ್ತರ ಹೀಗಿದೆ ; ಹೊರ ದೇಶಗಳಲ್ಲೂ ಪ್ರದರ್ಶಿಸುವ ಯೋಚನೆ ಇರುವುದರಿಂದ ಇಂಗ್ಲಿಷ್ ನಲ್ಲಿ ನಾಟಕ ಆಡುತ್ತಿದ್ದೇವೆ.

ದತ್ತಾನಿ ಮೂಲತಃ ಬೆಂಗಳೂರಿನವರು. ಮುಂಬೈ ರಂಗಮಂದಿರದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ರೂಬಿ ಚಕ್ರವರ್ತಿ ಮುಖಾಂತರ ದತ್ತಾನಿ, ಸುಷ್ಮಾಗೆ ಪರಿಚಿತರಾದರು. ಬೆಂಗಳೂರಿನ ಈ ಮೂವರೂ ಸೇರಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಕಥಾಕರ್ಸಂಸ್ಥೆಯನ್ನು ಹುಟ್ಟಿಹಾಕಿದ್ದಾರೆ.

ಸಿನಿಮಾ ರಂಗದಿಂದ ಬೆಳಕಿಗೆ ಬಂದ ಸುಷ್ಮಾ ಅದನ್ನು ಬಿಡದೆ ನಾಟಕದತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ತಮ್ಮ ಸಂಸ್ಥೆಯ ಈ ನಾಟಕವನ್ನು ಜಗತ್ತಿನಾದ್ಯಂತ ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಬೆಸ್ಟ್ ಆಫ್ ಲಕ್ ಸುಷ್ಮಾ..

ಇದನ್ನೂ ಓದಿ :
ಕೊಲೆ ಬೆದರಿಕೆ -ಸುಷ್ಮಾ ದೂರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada