»   » ನವ್ಯಾ ನಾಯರ್ ಕುರಿತು ವಿಷ್ಣು ಪುರಾಣ!

ನವ್ಯಾ ನಾಯರ್ ಕುರಿತು ವಿಷ್ಣು ಪುರಾಣ!

Posted By:
Subscribe to Filmibeat Kannada

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ನಟಿಯರಲ್ಲಿ ಕೇರಳ ಮೂಲದ ಬೆಡಗಿ ನವ್ಯಾ ನಾಯರ್ ಸಹ ಒಬ್ಬರು. ಅವರಿಗೆ ಸ್ಯಾಂಡಲ್‌ವುಡ್‌ ಅವಕಾಶಗಳ ಬಾಗಿಲನ್ನೇ ತೆರೆದಿದೆ. ದರ್ಶನ್‌ಗೆ ಜೊತೆಯಾಗಿ ನವ್ಯಾನಾಯರ್ ನಟಿಸಿದ 'ಗಜ' ಚಿತ್ರ ನೂರು ದಿನಗಳನ್ನು ಪೂರೈಸಿದೆ. ಈಗ ಮತ್ತೊಂದು ಚಿತ್ರಕ್ಕೆ ನವ್ಯಾನಾಯರ್ ಸಹಿ ಹಾಕಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾಗಿ 'ಬಾಸ್' ಚಿತ್ರ ಮತ್ತೆ ಕಾಣಿಸಲಿದ್ದಾರೆ.

ನಾನು ಚೆನ್ನಾಗಿ ಬಲ್ಲ ಸಾಕಷ್ಟು ನಟಿಯರಲ್ಲಿ ನವ್ಯಾನಾಯರ್ ಸಹ ಒಬ್ಬರು. ಅವರ ನಟನಾ ಸಾಮರ್ಥ್ಯ, ನಟನೆಯ ಬಗ್ಗೆ ಇರುವ ಆಸಕ್ತಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ಡಾ.ವಿಷ್ಣುವರ್ಧನ್ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಕನ್ನಡ ಭಾಷೆ ಗೊತ್ತಿಲ್ಲದಿದ್ದರೂ ಆಕೆಯ ನಟನೆ ನಿಜಕ್ಕೂ ಅದ್ಭುತ. ಆಕೆ ಒಬ್ಬ ಎಲ್ಲ ಗುಣಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಮಹಿಳೆ. ವಿಶೇಷ, ಧೃತಿಗೆಡದ ಹಾಗೂ ಆತ್ಮವಿಶ್ವಾಸದ ನಟಿ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಟಿ.ಎಸ್.ನಾಗಾಭರಣ ಅವರ ಬಹುನಿರೀಕ್ಷೆಯ ಚಿತ್ರ 'ನಂ ಯಜಮಾನ್ರು' ಚಿತ್ರದಲ್ಲಿ ವಿಷ್ಣುಗೆ ಸಹ ನಟಿಯಾಗಿ ನವ್ಯಾನಾಯರ್ ನಟಿಸುತ್ತಿದ್ದಾರೆ. 60 ದಿನಗಳ ಕಾಲದ ಚಿತ್ರೀಕರಣ ಇತ್ತೀಚೆಗೆ ಮೈಸೂರಿನಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಷ್ಣು ಚಿತ್ರದ ಬಗ್ಗೆ ಹೇಳುವುದಕ್ಕಿಂತ ನವ್ಯಾನಾಯರ್ ಕುರಿತು ಸಾಕಷ್ಟು ಹೇಳಿದರು. ವಿಜಯ ರಾಘವೇಂದ್ರ, ಲಕ್ಷ್ಮಿ ಗೋಪಾಲಸ್ವಾಮಿ, ಸೋನಾ ಗಿರಿ ದಿನೇಶ್, ಉಮೇಶ್ ಮತ್ತಿತರು ಚಿತ್ರದ ತಾರಾಗಣದಲ್ಲಿ ಇದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನಬಿಚ್ಚಿ ಮಾತನಾಡಿದ 'ಗಜ' ಚಿತ್ರದ ನಾಯಕಿ
ಮುನ್ನಾರ್‌ನಲ್ಲಿ 'ನಂ ಯಜಮಾನ್ರು' ನೃತ್ಯ ವೈಭವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada