»   » 21ಗಂಟೆ ದುಡಿವ ಗುರು ನಾನು!

21ಗಂಟೆ ದುಡಿವ ಗುರು ನಾನು!

Posted By:
Subscribe to Filmibeat Kannada

2005ನೇ ಸಾಲಿನ ಸ್ಟಾರ್‌ ಸಂಗೀತ ನಿರ್ದೇಶಕ ಎಂಬ ಹೆಮ್ಮೆ, ಗುರುಕಿರಣ್‌ಗೆ ಸಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.‘ಜೋಗಿ’ ಚಿತ್ರದ ಯಶಸ್ಸಿನ ನಂತರ ಗುರು ಸಖತ್ತು ಬಿಜಿಯಾಗಿದ್ದಾರೆ.

ಈ ಮಧ್ಯೆ ತೆಲುಗು ಚಿತ್ರರಂಗದ ಮೆಗಾಸ್ಟಾರ್‌ ಚಿರಂಜೀವಿ ಅವರ ಚಿತ್ರಕ್ಕೆ ಸಂಗೀತ ನೀಡುವ ಆಹ್ವಾನ ಗುರುಕಿರುಣ್‌ ಮುಂದಿದೆ. ನಿರ್ದೇಶಕ ವೀರಶಂಕರ್‌ ಈ ಪ್ರಸ್ತಾಪವನ್ನು ಗುರು ಮುಂದಿಟ್ಟಿದ್ದಾರೆ. ಗುರು ಇನ್ನೂ ಹೌದು ಅಥವಾ ಇಲ್ಲ ಏನನ್ನೂ ಹೇಳಿಲ್ಲ.

‘ಆಪ್ತಮಿತ್ರ’ ಮತ್ತು ‘ಜೋಗಿ’ ಯಶಸ್ಸು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರೇಕ್ಷಕರ ವಿಶ್ವಾಸ ಉಳಿಸಿಕೊಳ್ಳಲು, ಉತ್ತಮ ಸಂಗೀತ ನೀಡಿ ಮನಗೆಲ್ಲಲು ಪ್ರಯತ್ನ ನಡೆಸಿದ್ದೇನೆ. ಈ ನಿಟ್ಟಿನಲ್ಲಿ ದಿನದ 24ಗಂಟೆಗಳಲ್ಲಿ 21ಗಂಟೆಗಳು ಸಂಗೀತ ಲೋಕದಲ್ಲಿಯೇ ಕಳೆದು ಹೋಗುತ್ತಿವೆ ಎನ್ನುತ್ತಾರೆ ಗುರುಕಿರಣ್‌.

ತಾವು ಸಂಗೀತ ನೀಡಿರುವ 35ಚಿತ್ರಗಳಲ್ಲಿ ‘ಎ’ ಚಿತ್ರ ಮಾತ್ರ ಗುರುಗೆ ತುಸು ಸಮಾಧಾನ ನೀಡಿದೆಯಂತೆ. ಸಮಯ-ಸಂಭಾವನೆ ಕೊಟ್ಟರೆ, ಒಳ್ಳೆಯ ಸಂಗೀತ ನೀಡುವುದು ಕಷ್ಟವಲ್ಲ ಎಂಬುದು ಗುರು ಅವರ ಅಭಿಮತ.

ಕನ್ನಡ ಚಿತ್ರಗಳಲ್ಲಿ ಹಿಂಸೆ ಮಿತಿಮೀರಿದೆ, ರಕ್ತದ ಕೋಡಿ ಹರಿದಿದೆ ಎಂಬ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ ಆರೋಪದ ಬಗ್ಗೆ ಗುರುಗೆ ಬೇಸರವಿದೆ. ‘ಉತ್ಕರ್ಷ’, ‘ತರ್ಕ’ ಮತ್ತು ‘ಸಂಘರ್ಷ’ ಚಿತ್ರಗಳನ್ನು ನೆನಪಿಸಿಕೊಳ್ಳುವ ಅವರಿಗೆ, ದೇಸಾಯಿ ಅವರ ದ್ವಂದ್ವ ಮನಸ್ಥಿತಿಯ ಬಗೆಗೆ ಅಸಮಾಧಾನವಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada