»   » ರಮ್ಯ: ಡಿನ್ನರ್‌ಲೆಸ್‌ ಚಾಕೊಲೇಟ್‌ ಸುಂದರಿ

ರಮ್ಯ: ಡಿನ್ನರ್‌ಲೆಸ್‌ ಚಾಕೊಲೇಟ್‌ ಸುಂದರಿ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಚಿತ್ರರಂಗದ ಮೊದಲ ಮೆಟ್ಟಿಲನ್ನು ಕನ್ನಡದಲ್ಲಿ ಹತ್ತಿ, ಆ ನಂತರ ಬಾಲಿವುಡ್‌ ಗುರಿಯಿಟ್ಟುಕೊಂಡು ತೆಲುಗು- ತಮಿಳು ಚಿತ್ರರಂಗಕ್ಕೆ ಹಾರುವ ಹಕ್ಕಿಗಳ ಸಾಲಿಗೆ ಹೊಸ ಸೇರ್ಪಡೆಯಾಗಿರುವ ಬೆಂಗಳೂರಿನ ಬಿಸಿಬಿಸಿ ನಾಯಕಿ ರಮ್ಯ ಎಲ್ಲರಂತಲ್ಲದ ಹುಡುಗಿ.

ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದ ಈ ಹುಡುಗಿ ಆಡಿ- ಕುಣಿದದ್ದು ತಾಜ್‌ ವೆಸ್ಟೆಂಡಿನ ಪರಿಸರದಲ್ಲಿ. ಬ್ರಿಟಿಷರಂಥಾ ಶಿಸ್ತು ತನ್ನ ಪ್ಲಸ್‌ ಪಾಯಿಂಟ್‌ ಅಂತ ನಂಬಿರುವಾಕೆ. ಈಗ ಎರಡು ತಮಿಳು ಚಿತ್ರದ ಆಫರ್‌ ಬೆನ್ನೇರಿ ಚೆನ್ನೈ ಫ್ಲೈಟ್‌ ಹತ್ತಿರುವ ರಮ್ಯ, ದೀಪಾವಳಿ ದಿನ ಢಂ ಢಂ ಪಟಾಕಿಯನ್ನೂ ಭಯಪಡದೆ ಸಿಡಿಸಿದರು. ಆಮೇಲೆ ನೇರವಾಗಿ ಟೀವಿ ಸಂದರ್ಶನವೊಂದಕ್ಕೆ ಬಂದು ಕೂತರು. ಎದುರಿಗೆ ತರಾವರಿ ಸಿಹಿ ತಿನಿಸು. ಅವತ್ತು ಕನ್ನಡದಲ್ಲೇ ಅಚ್ಚುಕಟ್ಟಾಗಿ ಮಾತಾಡುತ್ತಾ ರಮ್ಯ ತನ್ನ ಪ್ರೀತಿಯ ಅಪ್ಪನನ್ನು ಬಾಯಿತುಂಬಾ ಹೊಗಳಿದರು. ಕೆಮೆರಾ ಎದುರಿಸಿದಾಗ ಭಯವೇ ಆಗಲಿಲ್ಲ ಎಂದರು. ಬಿಡುಗಡೆಗೆ ಸಿದ್ಧವಾಗಿರುವ ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದಲ್ಲಿ ಸುನಿಲ್‌ ರಾವ್‌ ನಟನೆ ಸೂಪರ್ಬ್‌ ಅಂತ ಮೆಚ್ಚಿಗೆಯ ಮಾತಾಡಿದರು. ಹಾಡುವುದು ಕುಣಿಯುವುದು ಅಂದರೆ ತುಂಬಾ ಇಷ್ಟ ಅಂದರು....

ಹೀಗೆ ಮಾತು ಮಾತು ಮಾತಿನ ಗೈರತ್ತಿನಲ್ಲಿ ಎದುರಿಗಿದ್ದ ಸಿಹಿ ತಿನಿಸು ಖಾಲಿ. ‘ಇದೇನು ರಮ್ಯ, ಸಿಹಿ ಹೀಗೆ ತಿಂತೀರಿ? ಡಯಟ್‌ ಮಾಡೋಲ್ವೆ?’ ಅಂದರೆ, ‘ಡಯಟ್ಟಾ... ಹಾಗಂದ್ರೇನು?’ ಎಂದು ನಕ್ಕಿದ್ದು ಅದೇ ರಮ್ಯ. ರಮ್ಯಾಗೆ ಚಾಕೊಲೇಟ್‌ ಮತ್ತು ಸ್ವೀಟ್ಸ್‌ ಅಂದರೆ ಪ್ರಾಣ. ಯಾವ ಹೊತ್ತಿನಲ್ಲಿ ಬೇಕಾದರೂ ಅವನ್ನು ಹೊಟ್ಟೆ ಬಿರಿಯುವಂತೆ ತಿನ್ನಲು ಸಿದ್ಧ. ‘ಹಾಗಿದ್ದೂ, ನೀವು ಸಪೂರ ಹೇಗಿದ್ದೀರಿ’ ಎಂಬ ಪ್ರಶ್ನೆಗೆ, ‘ರಾತ್ರಿ ಹೊತ್ತು ನಾನು ಊಟ ಮಾಡೋದೇ ಇಲ್ಲ’ ಅಂತ ಹೇಳಿ, ಇನ್ನೊಂದು ಸ್ವೀಟನ್ನು ಬಾಯಿಗಿಟ್ಟು ರಮ್ಯ ಚಪ್ಪರಿಸಿದರು.

Post your views

ಇದು ರಮ್ಯ ಚೈತ್ರ ಕಾಲ
ರಮ್ಯ ಎಂಬ ಬೆಂಝ್‌ ಬೆಡಗಿ, ಶಿಸ್ತಿನ ಹುಡುಗಿ
ರಮ್ಯಾ ಎಂದರೆ ಬಿಸಿ ಬಿಸಿ ಬಿಸಿ!
ತಾಜ್‌ ವೆಸ್ಟೆಂಡ್‌ನಲ್ಲಿ ರಮ್ಯ ವ್ಯಾಯಾಮ !


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada