ಕಿರಣ್ ಜೊತೆ ಅಮೀರ್ ಖಾನ್ ದಾಂಪತ್ಯ ಬಂಧನ
ಮುಂಬಯಿ : ಬಾಲಿವುಡ್‌ನ ಜಯಪ್ರಿಯ ನಟ ಅಮೀರ್ ಖಾನ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಅವರು ಹೊಸ ವರ್ಷದ ಮೊದಲ ದಿನವಾದ ಜ.1ರಂದು ಕಿರಣ್ ರಾವ್ ಅವರ ಕೈಹಿಡಿಯಲಿದ್ದಾರೆ.
‘ಲಗಾನ್’ ಚಿತ್ರದ ಸಹ ನಿರ್ದೇಶಕಿ ಕಿರಣ್‌ರಾವ್ ಮತ್ತು ಅಮೀರ್ ಖಾನ್ ಅವರ ವಿವಾಹ ಮಹೋತ್ಸವ ಮುಂಬಯಿನಿಂದ 250ಕಿ.ಮೀ ದೂರದಲ್ಲಿರುವ ಪಂಚಗಣಿ ವಿಹಾರಧಾಮದಲ್ಲಿ ನೆರವೇರಲಿದೆ. ಕಿರಣ್ ರಾವ್ ಬೆಂಗಳೂರು ಮೂಲದವರು.
ಎರಡು ಮಕ್ಕಳ ತಂದೆಯಾಗಿರುವ ಅಮೀರ್ ಖಾನ್, ಇತ್ತೀಚೆಗಷ್ಟೇ ತಮ್ಮ ಮೊದಲ ಪತ್ನಿ ರೀನಾಳಿಗೆ ವಿಚ್ಛೇದನ ನೀಡಿದ್ದರು.
(ಇನ್ಫೋ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications