»   » ಐಶ್ವರ್ಯಾಗೆ ಹಲವು ಇಂಗ್ಲಿಷ್‌ ಚಿತ್ರಗಳಲ್ಲಿ ಅವಕಾಶದ ಆಹ್ವಾನ

ಐಶ್ವರ್ಯಾಗೆ ಹಲವು ಇಂಗ್ಲಿಷ್‌ ಚಿತ್ರಗಳಲ್ಲಿ ಅವಕಾಶದ ಆಹ್ವಾನ

Posted By: Staff
Subscribe to Filmibeat Kannada

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಲಿವುಡ್‌ನಲ್ಲಿ ನಟಿಸುವ ದಿನಗಳು ಹತ್ತಿರದಲ್ಲೇ ಇವೆ. ಖುದ್ದು ಐಶ್ವರ್ಯಾ ರೈ ಅವರೇ ತಿಳಿಸಿದಂತೆ 2003 ನೇ ಇಸವಿಯ ಮಧ್ಯಭಾಗದ ವೇಳೆಗೆ ಅವರು ಹಾಲಿವು ಪ್ರವೇಶಿಸಲಿದ್ದಾರೆ. ಇತ್ತೀಚಿನ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಇಂಗ್ಲಿಷ್‌ ಚಿತ್ರಗಳಲ್ಲಿ ಅಭಿನಯಿಸಲು ಆಹ್ವಾನ ಬಂದಿದ್ದು, ಕಾಲ್‌ಷೀಟ್‌ ಸಮಸ್ಯೆಯಿಂದಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಮುಂಚೆ ಒಪ್ಪಿಕೊಂಡ ಇಲ್ಲಿನ ಸಿನಿಮಾಗಳನ್ನು ಮುಗಿಸಿದ ನಂತರ ಹಾಲಿವುಡ್‌ ಪ್ರವೇಶ ಸುಗಮವಾಗಲಿದೆ ಎಂದು ಐಶ್ವರ್ಯಾ ಹೇಳಿದರು.

ಜಿಂದಾಲ್‌ ಫೋಟೊ ಲಿಮಿಟೆಡ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.6 ರ ಶುಕ್ರವಾರ ಐಶ್ವರ್ಯಾ ಬೆಂಗಳೂರಿಗೆ ಆಗಮಿಸಿದ್ದರು. ಫ್ಯುಜಿ ಕಲರ್‌ ಕ್ರಿಸ್ಟಲ್‌ ಎಕ್ಸ್‌ಟ್ರಾ 400 ಫಿಲಂ ರೋಲ್‌ಗಳನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಂಗ್ಲಿಷ್‌ ಚಿತ್ರಗಳಲ್ಲಿ ಅಭಿನಯಿಸುವುದು ವಿಶಿಷ್ಟ ಅನುಭವ ಎಂದೇನೂ ತಾವು ಭಾವಿಸಿಲ್ಲ. ಆದರೆ ಹಾಲಿವುಡ್‌ ಚಿತ್ರಗಳಲ್ಲಿ ಭಾರತೀಯ ಛಾಪು ಮೂಡಿಸಲು ಕಾತರಳಾಗಿರುವುದಂತೂ ನಿಜ ಎಂದರು.

'ದೇವದಾಸ್‌" ಚಿತ್ರಕ್ಕೆ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆಯನ್ನು ಅದ್ಭುತ ಎಂದು ಬಣ್ಣಿಸಿದ ಐಶ್ವರ್ಯಾ, ತಮ್ಮ ಹೊಸ ಚಿತ್ರ 'ದಿಲ್‌ ಕಾ ರಿಷ್ತಾ" ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದರು. ತಾಯಿಯ ಚಿತ್ರಕಥೆ ಹಾಗೂ ಸೋದರ ಆ ದಿತ್ಯ ರೈ ಅವರ ಬಂಡವಾಳದ ಸಹಯೋಗದಲ್ಲಿ ತಯಾರಾಗಿರುವ 'ದಿಲ್‌ ಕಾ ರಿಷ್ತಾ" ಒಂದು ರೀತಿಯಲ್ಲಿ ನಮ್ಮ ಕುಟುಂಬದ ಪ್ರಾಡಕ್ಟ್‌. ಈ ಚಿತ್ರದಲ್ಲಿ ನಾನು ಉತ್ಸಾಹದಿಂದ ತೊಡಗಿಸಿಕೊಂಡಿದ್ದೇನೆ ಎಂದು ಐಶ್ವರ್ಯಾ ಹೇಳಿದರು.

ಕನ್ನಡದಲ್ಲಿ ನಟಿಸಲು ಅಡ್ಡಿಯೇನಿಲ್ಲ ?

ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲಿ ನಟಿಸಲು ಅಡ್ಡಿಯೇನಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಐಶ್ವರ್ಯಾ ಸ್ಪಷ್ಟನೆ ನೀಡಿದರು. ಹಿಂದಿಯಲ್ಲಿ ಅಭಿನಯಿಸಿದ್ದೇನೆ. ತಮಿಳು ಭಾಷೆಯ ಚಿತ್ರವೊಂದರಲ್ಲೂ ಅಭಿನಯಿಸಿದ್ದೇನೆ. ಬಂಗಾಳಿಯಲ್ಲೂ ಅಭಿನಯಿಸುತ್ತಿದ್ದೇನೆ. ಇಂಗ್ಲಿಷ್‌ನಲ್ಲಿ ಅಭಿನಯಿಸಲಿದ್ದೇನೆ. ಅದೇ ರೀತಿ ಕನ್ನಡದಲ್ಲೂ ಅಭಿನಯಿಸಲು ಅಡ್ಡಿಯಿಲ್ಲ ಎಂದು ಐಶ್ವರ್ಯಾ ನಕ್ಕರು. ನಾನು ಮಂಗಳೂರಿನವಳು. ಬಹಳ ದಿನಗಳ ನಂತರ ಕರ್ನಾಟಕಕ್ಕೆ ಕಾಲಿಡುತ್ತಿದ್ದೇನೆ ಎಂದು ಐಶ್ವರ್ಯಾ ಸಂತೋಷ ವ್ಯಕ್ತಪಡಿಸಿದರು.

English summary
Hollywood opportunities are welcoming Aish

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada