ನಿಮ್ಮ ಬಡಾವಣೆಗೆ ಗಣೇಶ ಬರ್ತಿದ್ದಾನೆ, ಬರಮಾಡಿಕೊಳ್ಳಿ

By Prasad

V Nagendra Prasad with Vijay Raghavendra
ಈ ವರ್ಷ ಗಣೇಶ ಚತುರ್ಥಿ ಬರುವ ಮುನ್ನವೇ ಗಣೇಶ ನಿಮ್ಮ ಮುಂದೆ ಬರುತ್ತಿದ್ದಾನೆ. ಕಡುಬು, ಮೋದಕ, ಕಜ್ಜಾಯ ಸಿಗದಿದ್ದರೂ ಭರ್ಜರಿ ಮನರಂಜನೆಗೆ ಬರವಿರುವುದಿಲ್ಲ. ಅಷ್ಟು ಮಾತ್ರವಲ್ಲ, ನಮ್ಮನ್ನೆಲ್ಲ 25 ವರ್ಷ ಹಿಂದಕ್ಕೆ ಎಳೆದೊಯ್ದು ನಾವು ಕಳೆದಂತಹ ಬಾಲ್ಯ, ಯೌವನ, ಪ್ರೀತಿ ಪ್ರೇಮದ ನೆನಪುಗಳ ಮೆರವಣಿಗೆ ಮಾಡಿಸಲಿದ್ದಾನೆ.

ಇದನ್ನೆಲ್ಲ ಅನುಭವಿಸಲು, ಕಳೆದುಹೋಗಿರುವ ನಿಮ್ಮತನವನ್ನು ಮತ್ತೆ ಕಂಡುಕೊಳ್ಳಲು ನೀವೆಲ್ಲ ಜುಲೈ 15ರಂದು ಕರ್ನಾಟಕದ ಥಿಯೇಟರುಗಳಿಗೆ ಬರಬೇಕು. ಡಾ. ವಿ. ನಾಗೇಂದ್ರ ಪ್ರಸಾದ್ ನಿರ್ದೇಶನದ 'ವಿನಾಯಕರ ಗೆಳೆಯರ ಬಳಗ', ಸ್ವಮೇಕ್ ಕನ್ನಡ ಚಲನಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.

ಹಿಟ್ ಚಿತ್ರಕ್ಕಾಗಿ ಇನ್ನೂ ತಡಕಾಡುತ್ತಿರುವ ವಿಜಯ ರಾಘವೇಂದ್ರ, ನಟನೆಯಲ್ಲಿ ತಮ್ಮದೇ ನವೀನ ಸ್ಟೈಲ್ ಹೊಂದಿರುವ ನವೀನ್ ಕೃಷ್ಣ, ಮಾಡೆಲ್ ಟರ್ನಡ್ ನಟಿ ಮೇಘನಾ ಗಾಂವಕರ್ ಪ್ರಮುಖ ಭೂಮಿಕೆಯಲ್ಲಿರುವವರಿಗೆ ಗಣೇಶನ ಪಟ್ಟಿ ನೀಡುವ ಬದಲು ಟಿಕೆಟ್ ತೆಗೆದುಕೊಂಡು ಚಿತ್ರವನ್ನು ಮಂದಿರದಲ್ಲಿ ನೋಡಿರಿ.

ಜಿಟಿ ಪ್ರೊಡಕ್ಷನ್ ಮತ್ತು ಉತ್ಸವ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕಾಗಿ ಸಾಕಷ್ಟು ಬೆವರು ಸುರಿಸಿರುವ ನಾಗೇಂದ್ರ ಪ್ರಸಾದ್ ನಮ್ಮನ್ನೆಲ್ಲ ಕಳೆದ ಶತಮಾನದ 80ರ ದಶಕಕ್ಕೆ ಎಳೆದೊಯ್ಯುತ್ತಿದ್ದಾರೆ. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಇಡೀ ಚಿತ್ರವನ್ನು ಸ್ಟೆಡಿ ಕ್ಯಾಮೆರಾ ಬಳಸಿ ಚಿತ್ರೀಕರಿಸಲಾಗಿದೆ ಎಂದು ಪ್ರಸಾದ್ ಹೆಮ್ಮೆಯಿಂದ ದಟ್ಸ್ ಕನ್ನಡಕ್ಕೆ ತಿಳಿಸಿದರು.

ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಎಳೆದುತರಲು ಏನೇನು ಮಾಡಬೇಕೋ ಅದನ್ನೆಲ್ಲ ನಾಗೇಂದ್ರ ಪ್ರಸಾದ್ ಮಾಡಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಿಂಧನೂರು, ಗದಗ, ಹಾಸನ, ಮೈಸೂರು, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬಿಜಾಪುರ, ಬೀದರ, ಗಂಗಾವತಿ, ತುಮಕೂರಿಗೆಲ್ಲ ಸಂಚರಿಸಿ ರೋಡ್ ಶೋ ನಡೆಸಿದ್ದಾರೆ, ಕಾಲೇಜುಗಳಿಗೆ ಭೇಟಿ ಮಾಡಿ ಯುವಕರೊಡನೆ ಸಂವಾದ ನಡೆಸಿದ್ದಾರೆ.

'ಮೇಘವೆ ಮೇಘವೆ' ನಿರ್ದೇಶಿಸಿ ನಿರಾಶೆ ಹೊಂದಿದ್ದ ನಾಗೇಂದ್ರ ಪ್ರಸಾದ್ ಅವರಿಗೆ ಗಣೇಶ ಮತ್ತು ಕನ್ನಡ ಕರ್ನಾಟಕ ವಿನಾಯಕ ಗೆಳೆಯ, ಗೆಳತಿಯರ ಬಳಗ ಆಶೀರ್ವಾದ ಮಾಡಲಿ.

More from Filmibeat

English summary
Kannada movie Vinayaka Geleyara Balaga is getting released all over Karnataka on July 15. VGB is directed by ambitious V Nagendra Prasad. Vijay Raghavendra, Naveen Krishna and Meghana Gaonkar are in the lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X