ನಟ ದರ್ಶನ್ ಈಗ ಅಭಿಮಾನಿಗಳ ಪಾಲಿಗೆ ಅಣ್ಣ

ಸದ್ಯಕ್ಕೆ ಕನ್ನಡ ಚಿತ್ರೋದ್ಯಮದಲ್ಲಿ ಏನೇ ವಿವಾದ, ಜಗಳಗಳು ಉದ್ಭವಿಸಿದರೂ ಮುಂದೆ ನಿಂತು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗುತ್ತಿರುವವರು ರೆಬೆಲ್ ಸ್ಟಾರ್ ಅಂಬರೀಷ್. ಸಮಸ್ಯೆಗಳು ದೊಡ್ಡದೇ ಇರಲಿ ಚಿಕ್ಕದೇ ಇರಲಿ ಅಂಬರೀಷ್ ಹೇಳಿದರೆಂದರೆ ಮರು ಮಾತನಾಡುವಂತಿಲ್ಲ.
ಆದರೆ ಇದೇ ಅಂಬರೀಷ್ ಅವರು ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಸಮಸ್ಯೆ ಬಿಡಿಸಲು ಹೋಗಿ ವಿಫಲರಾಗಿದ್ದರು. ಅಂಬಿ ಮಾತಿಗೆ ಬೆಲೆ ಕೊಡದ ದರ್ಶನ್ "ನೀನ್ಯಾವ ದೊಡ್ಡ ಮನುಷ್ಯ ಅಂಥ ಬಂದ್ಬಿಟ್ಟೆ ಹೋಗಯ್ಯ" ಎಂದಿದ್ದರಂತೆ. ಈ ಮಾತಿಗೆ ಕುಪಿತರಾಗಿದ್ದ ಅಂಬಿ, ಹೋಗಮ್ಮ ಪೊಲೀಸರಿಗೆ ಕಂಪ್ಲೇಂಟ್ ಕೊಡೋಗು ಎಂದು ವಿಜಯಲಕ್ಷ್ಮಿಗೆ ಹೇಳಿದ್ದರು. ಬಳಿಕ ಪರಿಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಶುಕ್ರವಾರ (ಅ.7) ದರ್ಶನ್ ಬಿಡುಗಡೆಯಾಗುತ್ತಿದ್ದಂತೆ ಅವರಅಭಿಮಾನಿಗಳ ಬಾಯಿಂದ ದರ್ಶನ್ 'ಅಣ್ಣ' ಎಂಬ ಮಾತುಗಳು ಕೇಳಿಬಂದಿವೆ. ಅಣ್ಣನಿಗೆ ಜಯವಾಗಲಿ ಎಂಬ ಮಾತುಗಳು ಕೇಳಿಬಂದಿವೆ. ಜೈಲಿಗೆ ಹೋಗಿ ಬಂದದ್ದೇ ತಡ ದರ್ಶನ್‌ರನ್ನು 'ಅಣ್ಣ' ಎಂದು ಕರೆಯುತ್ತಿರುವುದು ಅಷ್ಟು ಸರಿಯಾದ ಕ್ರಮವಲ್ಲ. ಅಭಿಮಾನಿಗಳು ಕೊಂಚ ವಿವೇಚನೆಯಿಂದ ವ್ಯವಹಿಸಬೇಕಾಗುತ್ತದೆ.


Click it and Unblock the Notifications











