ಪುಂಡ ವಿದ್ಯಾರ್ಥಿಗಳೊಂದಿಗೆ ಜಗ್ಗೇಶ್ ಡಿಶುಂ ಡಿಶುಂ
ನವರಸ ನಾಯಕ ಜಗ್ಗೇಶ್ ಪುಂಡ ವಿದ್ಯಾರ್ಥಿಗಳಿಗೆ ಬೆಂಡೆತ್ತಿ ಬ್ರೇಕ್ ಹಾಕಿದ್ದಾರೆ. ಹುಡುಗಿಯರನ್ನು ಚುಡಾಯಿಸಿದ ಪುಂಡ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವಿದು. ಎಲ್ಲಿ, ಏನು, ಯಾವಾಗ ಎಂಬುದನ್ನು ಹೇಳುವುದಕ್ಕೂ ಮುನ್ನ ಇದನ್ನು ಓದಿ ಬಿಡಿ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಚಿತ್ರದ ನಾಯಕಿಯನ್ನು ಅದೇ ಕಾಲೇಜಿನ ಹುಡುಗರು ಚುಡಾಯಿಸುತ್ತಾರೆ. ಇದನ್ನು ಗಮನಿಸಿದ ನಾಯಕ ಅಲ್ಲಿಗೆ ಬರುತ್ತಾನೆ. ನಾಯಕನಿಗೂ ಹಾಗೂ ಆ ಹುಡುಗರಿಗೂ ಹೊಡೆದಾಟವಾಗುತ್ತದೆ.
ನಂತರ ನಾಯಕ ಹುಡುಗರನ್ನು ಕುರಿತು ಕಾಲೇಜು ದೇವಸ್ಥಾನವಿದ್ದ ಹಾಗೆ. ನಿಮ್ಮ ಅಪ್ಪಅಮ್ಮ ಕಷ್ಟಪಟ್ಟ ಕಾಲೇಜಿಗೆ ಕಳುಹಿಸುವುದು ಓದುವುದಕ್ಕೆ. ಹುಡುಗೀರನು ಚುಡಾಯಿಸುವುದಕ್ಕಲ್ಲ ಎಂದು ಬುದ್ದಿ ಹೇಳುತ್ತಾನೆ. ಇಷ್ಟೊತ್ತಿಗಾಗಲೆ ನಿಮಗೆ ಸೀನ್ ಅರ್ಥವಾಗಿರುತ್ತದೆ. ಇದು ರಿಯಲ್ ಅಲ್ಲ ರೀಲ್ ಎಂದು.
ಶಿವಲಿಂಗಪ್ಪ ಅರ್ಪಿಸುವ, ಗುರುರಾಜ ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಪರಿಮಳಾಜಗ್ಗೇಶ್ ಹಾಗೂ ಜಗ್ಗೇಶ್ ಅವರು ನಿರ್ಮಿಸುತ್ತಿರುವ 'ಬಾಡಿಗಾರ್ಡ್' ಚಿತ್ರಕ್ಕಾಗಿ ನಿರ್ದೇಶಕ ಟಿ.ಆನಂದ್ ಮಾಗಡಿ ರಸ್ತೆಯ ಈಸ್ಟ್‌ವೆಸ್ಟ್ ಕಾಲೇಜಿನಲ್ಲಿ ಚಿತ್ರಿಸಿಕೊಂಡರು. ಚಿತ್ರದ ನಾಯಕರಾದ ಜಗ್ಗೇಶ್, ನಾಯಕಿ ಡೈಸಿ ಶಾ, ಸಾಹಸ ಕಲಾವಿದರು ಹಾಗೂ ಸಹ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಥ್ರಿಲ್ಲರ್ ಮಂಜು ಈ ಸನ್ನಿವೇಶಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಶೋಕ್‌ವಿರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿನಯ್‌ಚಂದ್ರ ಸಂಗೀತ ನೀಡಿದ್ದಾರೆ. ರಾಜೇಂದ್ರ ಕಾರಂತ್ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ 'ಬಾಡಿಗಾರ್ಡ್ ಹಾಡುಗಳನ್ನು ಕವಿರಾಜ್, ರಾಂನಾರಾಯಣ್, ವಿ.ಮನೋಹರ್ ಬರೆದಿದ್ದಾರೆ. ಜಗ್ಗೇಶ್, ಡೈಸಿ ಶಾ, ಸ್ಪೂರ್ತಿ, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್, ಅಲಿ, ವಿನಯ್‌ಚಂದ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











