For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಪುತ್ರ ಮುರಳಿ ಇನ್ನಿಲ್ಲ

  By Rajendra
  |
  ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪುತ್ರ ಹಾಗೂ ಬಹುಭಾಷಾ ನಟ ಮುರಳಿ ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಬುಧವಾರ(ಸೆ.8) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ನಸುಕಿನ 4 ಗಂಟೆ ಸಮಯದಲ್ಲಿ ಅವರು ಸಾವಪ್ಪ್ಪಿದ್ದಾರೆ. ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಮುರಳಿ ಗುರುತಿಸಿಕೊಂಡಿದ್ದರು.

  ಭಾನುವಾರವಷ್ಟೆ ಅವರ ಮಗಳ ನಿಶ್ಚಿತಾರ್ಥ ನಡೆದಿತ್ತು. ಕನ್ನಡದ 'ಪ್ರೇಮ ಗಂಗಾ', 'ಸಂಭವಾಮಿ ಯುಗೇ ಯುಗೇ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ ಅವರು ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ತೊಡಗಿಕೊಂಡಿದ್ದರು. ತಮಿಳಿನ 'ಬಾನ ಕಾತಾಡಿ' ಅವರ ಅಭಿನಯದ ಕೊನೆಯ ಚಿತ್ರ.

  ಕನ್ನಡ ಹಾಗೂ ತಮಿಳಿನಲ್ಲಿ ಅವರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ 'ಪ್ರೇಮ ಪರ್ವ' ಮುರಳಿ ಅಭಿನಯದ ಪ್ರಥಮ ಚಿತ್ರ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ತಮಿಳಿನಲ್ಲಿ ಅವರ ಶ್ರೇಷ್ಠ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಒಲಿದಿತ್ತು. 'ಅಜಯ್ ವಿಜಯ್' ಚಿತ್ರದಲ್ಲೂ ಅಭಿನಯಿಸಿದ್ದಾರೆ.

  ಮುರಳಿ ನಿಧನಕ್ಕೆ ಚಿತ್ರನಟಿ ಭವ್ಯಾ ಸೇರಿದಂತೆ ಸಂಗೀತ ನಿರ್ದೇಶಕ ವಿ ಮನೋಹರ್, ಹಂಸಲೇಖ ಹಾಗೂ ಕನ್ನಡ ಚಿತ್ರರಂಗದ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 1983ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಪ್ರಾಥಮಿಕ ಶಿಕ್ಷಣವನ್ನು ಅವರು ಚೆನ್ನೈನಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ್ದರು.

  ಮುರಳಿ ಅವರು ಪುತ್ರ,ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಂತಾಗಿದೆ. ತಮ್ಮ 14ನೇ ವರ್ಷಕ್ಕೆ ಮುರಳಿ ಅವರು ತಂದೆ ಸಿದ್ದಲಿಂಗಯ್ಯ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಅವರ ಪುತ್ರ ಅಧರ್ವ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ.

  ಮುರಳಿಗೆ ಅಂತಿಮ ನಮನ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X