ಬೆಂಗಳೂರಿನಲ್ಲಿ ಬರ್ತ್ ಡೇ ಆಚರಿಸಿಕೊಂಡ ಅನುಷ್ಕಾ
ತೆಲುಗು ಚಿತ್ರರಂಗದ ನಂಬರ್ ಒನ್ ತಾರೆ, ಏಕೈಕ ಕೋಟಿ ನಟಿ ಅನುಷ್ಕಾ ಶೆಟ್ಟಿ ನಿನ್ನೆ (ನವೆಂಬರ್ 7) ಕ್ಕೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ವಿಶೇಷ ಎಂದರೆ ಬೆಂಗಳೂರಿನ ಇಂದಿರಾನಗರದಲ್ಲಿ ಅವರ ಹುಟ್ಟುಹಬ್ಬ ಯಾವ ಸಿನಿಮಾ ಮಂದಿಯ ಹಾಜರಿಯಿಲ್ಲದೇ ಅಬ್ಬರದಿಂದ ದೂರವಿದ್ದು 'ಸ್ವೀಟ್ ಅಂಡ್ ಸಿಂಪಲ್' ಆಗಿತ್ತು.
ಅವರ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ ಹಾಗೂ ಕೆಲವು ಬಾಲ್ಯ ಸ್ನೇಹಿತರ ಸಮ್ಮುಖದಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನು ಸವಿದ ಅನುಷ್ಕಾ, ದೊಡ್ಡ ನಟಿಯೆಂಬ ಹಮ್ಮು-ಬಿಮ್ಮು ಇಲ್ಲದೇ ಎಲ್ಲರ ಜೊತೆ ಹೊಂದಿಕೊಂಡು ಓಡಾಡಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಮನೆಯವರೆಲ್ಲಾ ಅನುಷ್ಕಾ ಶೆಟ್ಟಿಯನ್ನು ಪ್ರೀತಿಯಿಂದ ಕರೆಯುವ ಹೆಸರು 'ಸ್ವೀಟಿ'.
ಇದೇ ವೇಳೆ ತಾವು ಆದಷ್ಟು ಶೀಘ್ರದಲ್ಲಿಯೇ ಕನ್ನಡ ಸಿನಿಮಾದಲ್ಲಿ ನಟಿಸಲಿರುವ ಸುದ್ದಿಯನ್ನು ಅನುಷ್ಕಾ ಮತ್ತೆ ಪುನರುಚ್ಚರಿಸಿದರು. ಕೇಕ್ ಮೇಲೆ 'ಹ್ಯಾಪಿ ಬರ್ತ್ ಡೇ ಸ್ವೀಟಿ ಶೆಟ್ಟಿ' ಎಂದು ಬರೆಯಲಾಗಿತ್ತು. ಕನ್ನಡಿಗರಿಗೆ ಕನ್ನಡತಿ ಅನುಷ್ಕಾ ಮುಖ ನೋಡುವ ಭಾಗ್ಯ ಆದಷ್ಟು ಬೇಗ ಸಿಗಲಿ ಎಂಬುದು ಎಲ್ಲರ ಆಶಯ. (ಒನ್ ಇಂಡಿಯಾ ಕನ್ನಡ)


Click it and Unblock the Notifications











