For Quick Alerts
  ALLOW NOTIFICATIONS  
  For Daily Alerts

  ಸಾಧನೆಗೆ ನಾನೇ ಮಾದರಿಯಲ್ವೇ ಎಂದರು ರಮ್ಯಾ

  |

  ಇಂದು ಮಹಿಳಾ ದಿನಾಚರಣೆ. ಈ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಹಳಷ್ಟು ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿ ಎಂದೇ ಗುರುತಿಸಿಕೊಂಡಿರುವ ರಮ್ಯಾ, ಯುವ ಕಾಂಗ್ರೆಸ್ ಸದಸ್ಯೆಯೂ ಹೌದು. ಇಂತಹ ರಮ್ಯಾ, ರಾಜಕೀಯದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಹೀಗೆ ಹೇಳುತ್ತಾರೆ. "ಅಫ್ಘಾನಿಸ್ತಾನದಂತಹ ದೇಶಗಳಲ್ಲಿ ತನ್ನ ಜೀವನದ ಹಂಗು ತೊರೆದು ಸಾರ್ವಜನಿಕ ಚುನಾವಣೆಯಲ್ಲಿ ನಿಲ್ಲುವ ಮಟ್ಟಕ್ಕೆ ಬೆಳೆದಿರುವುದು ಅಚ್ಚರಿಯ ಜೊತೆಗೆ ಮೆಚ್ಚಲೇಬೇಕಾದ ಬೆಳವಣಿಗೆ.

  ಇದನ್ನು ನಮ್ಮ ಹೆಣ್ಣುಮಕ್ಕಳೆಲ್ಲಾ ಮಾದರಿ ಆಗಿಸಿಕೊಳ್ಳಬೇಕು. ನಾನೂ ಕೂಡ ಇದರಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಮುಂದೊಮ್ಮೆ ರಾಷ್ಟ್ರರಾಜಕಾರಣದಲ್ಲಿ ಹೆಸರು ಮಾಡುವ ಅಭಿಲಾಷೆ ನನಗಿದೆ. ಪ್ರತಿಯೊಬ್ಬ ಮಹಿಳೆಯಲ್ಲೂ ಅಸಾಮಾನ್ಯವಾದ ಯಾವುದೇ ಶಕ್ತಿ ಇದೆ. ವುಮೆನ್ ಅಂದ್ರೆ ನಾರ್ಮಲ್ ಅಂತ ಭಾವಿಸುವುದು ಬೇಡ, ಗಂಡಸರಿಗಿಂತ ಹೆಚ್ಚು ತಾಳ್ಮೆ, ಆತ್ಮವಿಶ್ವಾಸ ನಮಗಿರುತ್ತೆ. ಅದಕ್ಕೆ ನಾನೇ ಬೆಸ್ಟ್ ಉದಾಹರಣೆ ಎಂದಿದ್ದಾರೆ.

  ಸಾಮಾನ್ಯರಲ್ಲಿ ಅಸಾಮಾನ್ಯ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮದಾಗಿರಬೇಕು. ಆಗ ಎಲ್ಲರಿಗೂ ಪ್ರಚಾರ ಸಿಗೋದು ಸಾಧ್ಯ. ಬರೀ ಬೆಂಗಳೂರಿನಲ್ಲಿ ಇರುವ ವುಮೆನ್ ಸೆಲೆಬ್ರಿಟಿಗಳ ಬಗ್ಗೆ ಮಾತ್ರ ಬರೆಯೋದು, ಪ್ರಚಾರ ಕೋಡೋದು ತಪ್ಪು ಅನ್ಸುತ್ತೆ" ಎಂದು ಹೇಳಿ ತಮ್ಮ ಅಸಾಮಾನ್ಯ ಜ್ಞಾನವನ್ನೂ ಪ್ರದರ್ಶಿಸಿದ್ದಾರೆ ರಮ್ಯಾ. (ಒನ್ ಇಂಡಿಯಾ ಕನ್ನಡ)

  Read more about: ರಮ್ಯಾ ramya
  English summary
  Actress Ramya told on the occasion of Women Day Special that women's are the great achievers. She adds that I am the best example of this. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X