ತೆರೆದಿದೆ ಮನೆ ಓ ಬಾ ಅತಿಥಿ ಅಂದಿದ್ದರು ಸರಿತಾ
ಕನ್ನಡ ಚಿತ್ರರಂಗದಲ್ಲಿ ಒಂದಾನೊಂದು ಕಾಲದಲ್ಲಿ ಕನ್ನಡಿಗರ ಮನದಲ್ಲಿ ನೆಲೆನಿಂತಿದ್ದ ನಟಿಯರ ಪಟ್ಟಿಯಲ್ಲಿ ಸರಿತಾ ಹೆಸರು ಗ್ಯಾರಂಟಿ. ಈಕೆ ಸುರಸುಂದರಿ ಅಲ್ಲವೇ ಅಲ್ಲ. ಹೋಗಲಿ ಕಪ್ಪು ಸುಂದರಿಯೂ ಅಲ್ಲ. ಆದರೆ ಅಭಿನಯದಲ್ಲಿ ಮಾತ್ರ ಮಹಾಪ್ರವೀಣೆ. ಅವರ ಕಣ್ಣಿನಲ್ಲೇ ಮೂಡುತ್ತಿದ್ದ ಅಭಿನಯಕ್ಕೆ ಮಾರುಹೋಗದವರು ಯಾರು?
ಕಣ್ಣಿನಲ್ಲೇ ಕಾದಂಬರಿ ಬರೆಯುತ್ತಾರೆ ಸರಿತಾ. ಸದ್ಯಕ್ಕೆ ಮಕ್ಕಳಿಬ್ಬರ ಜೊತೆ ನ್ಯೂಜಿಲ್ಯಾಂಡಿನಲ್ಲಿರುವ ಸರಿತಾ ಮತ್ತೆ ತೆರೆಗೆ ಬರಲು ರೆಡಿ ಆಗಿದ್ದಾರೆ. ಕಾರಣ ಈಗ ಅವರು ಹ್ಯಾಪಿ ಸಂಸಾರ ನೋಡಿದ್ದಾಗಿದೆ. ಗಂಡುಮಕ್ಕಳಿಬ್ಬರೂ ಚೆನ್ನಾಗಿ ಓದಿ ಜೀವನದಲ್ಲಿ ಸೆಟ್ಲ್ ಆಗುವ ಹಂತ ತಲುಪಿದ್ದಾರೆ. ಇನ್ನೇನಿದ್ದರೂ ಸರಿತಾಗೆ ವಿರಾಮ.
ಈ ಮೊದಲು ಕನ್ನಡದಲ್ಲಿ ಅವರು ನಟಿಸಿದ 'ಸಂಕ್ರಾಂತಿ' ಎಂಬ ಚಿತ್ರಕ್ಕೆ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದರು ಸರಿತಾ. ಆ ಚಿತ್ರದ ನಿರ್ಮಾಪಕರಾದ ನಂಜುಂಡೇಗೌಡರ ಹೊಸ ಚಿತ್ರದಲ್ಲಿ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸುದೀರ್ಘ ಅವಧಿಯ ನಂತರ ಮತ್ತೆ ಬಂದರೂ ಸರಿತಾ ಕನ್ನಡಿಗರಿಗೆ ಹೊಸಬರು ಎನಿಸುತ್ತಿಲ್ಲ. ಕಾರಣ ಅವರನ್ನು ಯಾರೂ ಮರೆತೇ ಇಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











