ಇನ್ನೊಮ್ಮೆ ಅಮ್ಮನಾದ ಕನ್ನಡದ ಸಿನಿಮಾ ತಾರೆ ಶ್ರುತಿ

By Rajendra

ಅಳುಮುಂಜಿ ಪಾತ್ರಗಳಿಂದ ಕನ್ನಡದ ನಾರಿಮಣಿಗಳ ಕೈಗೆ ಕರವಸ್ತ್ರ ಕೊಟ್ಟಿದ್ದ ನಟಿ ಶ್ರುತಿ ಈಗ ಮತ್ತೊಮ್ಮೆ ಅಮ್ಮನಾಗಿದ್ದಾರೆ! ಯಾವಾಗ ಏನು, ಎಲ್ಲಿ, ಹೆಣ್ಣು ಮಗುನಾ, ಗಂಡು ಮಗುನಾ ಅಥವಾ ಅವಳಿ ಜವಳಿಯೇ ಎಂಬ ಪ್ರಶ್ನೆಗಳಿಗೆ ಬ್ರೇಕ್ ಹಾಕಿ ಮುಂದೆ ಓದಿ.

ಈ ಹಿಂದೆ 'ಹೆತ್ತಕರುಳು' ಚಿತ್ರದಲ್ಲಿ ಮೂರು ಮಕ್ಕಳ ತಾಯಿಯಾಗಿ ಹಾಗೂ 'ವೀರಪ್ಪ ನಾಯಕ' ಪ್ರಬುದ್ಧ ತಾಯಿಯಾಗಿ ಕಾಣಿಸಿಕೊಂಡಿದ್ದರು ಶ್ರುತಿ. ಈಗ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ 'ಶಬ್ದಮಣಿ' ಚಿತ್ರದಲ್ಲಿ. ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋಗೆ ತಂಗಿಯಾಗಿ, ಎಸ್ ಮಹೇಂದರ್ ನಿರ್ದೇಶನದ ಅಕ್ಕ ತಂಗಿ ಚಿತ್ರದಲ್ಲಿ ದುನಿಯಾ ಖ್ಯಾತಿಯ ರಶ್ಮಿಗೆ ಅಕ್ಕನಾಗಿ, ಕವಿತಾ ಲಂಕೇಶ್ ಅವರ 'ಅವ್ವ' ಸೇರಿದಂತೆ ಇನ್ನೂ ಹಲವಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಪೋಷಿಸುವ ಮೂಲಕ ಶ್ರುತಿ ಗಮನಸೆಳೆದಿದ್ದರು.

ಬಿ ಸುರೇಶ್ ಅವರ ಪುಟ್ಟಕ್ಕನ ಹೈವೆ ಚಿತ್ರದಲ್ಲಿ ಶ್ರುತಿ ಅಭಿನಯ ಗಮನಸೆಳೆದಿತ್ತು. ಈಗ ಶಬ್ದಮಣಿ ಎಂಬ ಚಿತ್ರದಲ್ಲಿ ಶ್ರುತಿ ಮತ್ತೊಮ್ಮೆ ಅಮ್ಮನಾಗುತ್ತಿದ್ದಾರೆ! ಈ ಬಗ್ಗೆ ಅವರಿಗೆ ಹೆಮ್ಮೆಯೂ ಇದೆಯಂತೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಶ್ರುತಿ ಮಾತನಾಡುತ್ತಾ, ಲಾಂಗು ಮಚ್ಚು ಕೊಚ್ಚು ಚಿತ್ರಗಳಲ್ಲಿ ಅಮ್ಮನಾಗುವುದಕ್ಕಿಂತ ದೇಶ ರಕ್ಷಿಸುವ ಸೈನಿಕನಿಗೆ ಅಮ್ಮನಾಗುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದಿದ್ದಾರೆ.

ಚನ್ನಪಟ್ಟಣ್ಣ, ಮಡಿಕೇರಿ ಪ್ರದೇಶಗಳಲ್ಲಿ ౩౦ ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಚಿತ್ರದ ಮೂಲಕ ರೇಣು ಡಿಜಿಟರ್ ಸ್ಟುಡಿಯೋ ಮಾಲೀಕ ರೇಣುಕುಮಾರ್ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. ಇದೊಂದು ದೇಶಭಕ್ತ ಸಾರುವ ಚಿತ್ರವಾಗಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actress Shruthi played a mother role in Kannada movie Shabdamani. She plays the mother of a patriotic son in Kannada movie Shabdamani. 'Jnanpeeth Award' winner Girish Karnad appear in prominent role in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X