»   » ಕನ್ನಡಕ್ಕೆ ಬಂದ ಸೋನಾ ಎಂಬ ಐಟಂ ಬಾಂಬ್!

ಕನ್ನಡಕ್ಕೆ ಬಂದ ಸೋನಾ ಎಂಬ ಐಟಂ ಬಾಂಬ್!

Posted By:
Subscribe to Filmibeat Kannada

'ನಮ್ ಯಜಮಾನ್ರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಸೋನಾ ಸೆಕ್ಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದುವರೆಗೂ ಬರೋಬ್ಬರಿ 17 ತೆಲುಗು, 12 ತಮಿಳು ಹಾಗೂ 3 ಮಲಯಾಳಂ ಚಿತ್ರಗಳು ಸೋನಾ ಅವರ ಖಾತೆಯಲ್ಲಿ ಜಮೆಯಾಗಿವೆ. ನಟ ವಿಷ್ಣುವರ್ಧನ್‌ರ ಆಪ್ತ ಸಹಾಯಕಿಯಾಗಿ ಸೆಕ್ಸಿ ಪಾತ್ರದಲ್ಲಿ 'ನಮ್ ಯಜಮಾನ್ರು' ಚಿತ್ರದಲ್ಲಿ ಕಾಣಿಸಲಿದ್ದಾರೆ. ಕನ್ನಡ ಚಿತ್ರರಂಗಕ್ಕಿಂತಲೂ ಉತ್ತಮವಾದ ಮತ್ತೊಂದು ಚಿತ್ರರಂಗವನ್ನು ನಾನು ಇಡೀ ನನ್ನ ವೃತ್ತಿ ಜೀವನದಲ್ಲಿ ಇದುವರೆಗೂ ಕಂಡಿಲ್ಲ ಎನ್ನುತ್ತಾರೆ ಸೋನಾ.

ಯಾಕೆ? ಎಂದು ಅವರನ್ನು ಮರುಪ್ರಶ್ನಿಸಿದರೆ, ಚಿತ್ರೀಕರಣ ಸಮಯದಲ್ಲಿ ನನಗೆ ಆರೋಗ್ಯ ಕೈಕೊಡ್ತು. ನನ್ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ನನಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದರು. ಮರುದಿನ ಚಿತ್ರೀಕರಣಕ್ಕೆ ಬಂದ ನಾನು ಅಲ್ಲಿನ ವಾತಾವರಣ ಕಂಡು ಬೆರಗಾದೆ. ಏನೂ ನಡೆದೇ ಇಲ್ಲವೇನೋ ಎಂಬಂತೆ ಎಲ್ಲರೂ ಕೂಲಾಗಿದ್ದರು. ಇದೇ ರೀತಿ ತೆಲುಗು ಅಥವಾ ತಮಿಳು ಚಿತ್ರರಂಗದಲ್ಲಿ ನಡೆದಿದ್ದರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಚಿತ್ರೀಕರಣಕ್ಕೆ ಬರಬೇಕು ಎಂದು ಧಮಕಿ ಹಾಕುತ್ತಿದ್ದರು. ಮಾನವತ್ವ ಅನ್ನೋದು ಏನಾದ್ರು ಉಳಿದಿದೆ ಎಂದ್ರೆ ಅದು ಕನ್ನಡ ಚಿತ್ರರಂಗದಲ್ಲಿ ಮಾತ್ರ ರೀ...ಎಂದು ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿದರು.

ಮೊದಲೆಲ್ಲಾ ನಾಯಕಿ ಪಾತ್ರಗಳಲ್ಲಿ ನಟಿಸುತ್ತಿದ್ದ ಸೋನಾ ನಂತರ ಪೋಷಕ ಪಾತ್ರಗಳಿಗೆ ಹಿಂಬಡ್ತಿ ಪಡೆದುಕೊಂಡರು. ತೆಲುಗು ಹಾಗೂ ತಮಿಳಿನ ಬಹುತೇಕ ಚಿತ್ರಗಳಲ್ಲಿ ಅವರ ಪಾತ್ರ ಬರೀ ಆಕರ್ಷಣೆ ಮತ್ತು ಪೋಷಕ ಪಾತ್ರಗಳಿಗಷ್ಟೇ ಸೀಮಿತವಾಗಿತ್ತು. ರಜನಿಕಾಂತ್ ನಟನೆಯ 'ಕುಸೇಲನ್' ಚಿತ್ರದಲ್ಲಿ ಹಾಸ್ಯನಟ ವಡಿವೇಲುಗೆ ಜೋಡಿಯಾಗಿ ಸೋನಾ ನಟಿಸಿದ್ದಾರೆ. ಚಿತ್ರರಂಗದಲ್ಲಿ ಬಹಳಷ್ಟು ಕಾಲ ನಾಯಕಿಯಾಗಿ ನೆಲೆನಿಲ್ಲುವುದು ಕಷ್ಟ ಎಂಬ ಅನುಭವ ಸತ್ಯವನ್ನು ಕಣ್ಣಾರೆ ಕಂಡಿದ್ದಾರೆ.

ನವದೆಹಲಿ ಹಾಗೂ ಪುಣೆಯಲ್ಲಿ ಓದಿರುವ ಸೋನಾ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇವರ ತಂದೆ ಫ್ರಾನ್ಸ್ ಮೂಲದವರಾದರೆ ತಾಯಿ ಶ್ರೀಲಂಕಾ ಮೂಲದವರು. ಮಾನವನ ಸ್ವಭಾವ ಎಂಬ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್‌ನ್ನು ಮಾಡಿರುವ ಸೋನಾ ಚಿತ್ರರಂಗದವರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿದ್ದಾರೆ. ಕನ್ನಡ ಚಿತ್ರರಂಗ ಅವರನ್ನು ಹೇಗೆ ಬಳಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಹೊಡೆದಾಟದಲ್ಲಿ ನಂ ಯಜಮಾನ್ರು ವಿಷ್ಣು
ಮುನ್ನಾರ್‌ನಲ್ಲಿ 'ನಂ ಯಜಮಾನ್ರು' ನೃತ್ಯ ವೈಭವ
ಮಾನಸಗಾನಕ್ಕೆನಂಯಜಮಾನ್ರು ಜೋಡಿ ನರ್ತನ
ಚಿಕ್ಕಮಗಳೂರಲ್ಲಿ ಸಾಗಿದೆ 'ನಂ ಯಜಮಾನ್ರ' ದರ್ಬಾರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada