ಯೋಗರಾಜ್ ಭಟ್ಟರ ಸಿನಿಮಾಗೆ ಟಬು ಆಗಮನ
ಪರಮಾತ್ಮ ಸಿನಿಮಾ ಜನಪ್ರಿಯತೆ ಪಡೆಯುವಲ್ಲಿ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಯೋಗರಾಜ್ ಭಟ್ ಅವರ ಮುಂದಿನ ನಡೆಯ ಬಗ್ಗೆ ಜನರಲ್ಲಿ ತೀವ್ರ ಕುತೂಹಲ ಉಂಟಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಂತಾಗಿದೆ. ಭಟ್ಟರು ಮುಂದಿನ ಸಿನಿಮಾಗೆ ರೆಡಿ ಆಗುತ್ತಿದ್ದಾರೆ ಹಾಗೂ ಅದರಲ್ಲಿ ಪ್ರಮುಖ ಪಾತ್ರಗಳಲ್ಲಿ ಖ್ಯಾತ ನಟಿ ಟಬು ಹಾಗೂ ಅನಂತ್ ನಾಗ್ ನಟಿಸಲಿದ್ದಾರೆ.
ಹೀಗೊಂದು ಸುದ್ದಿ ಈಗಾಗಲೇ ಬಹಿರಂಗಗೊಂಡಿದ್ದು, ಟಬು ಭಟ್ಟರ ಕಥೆಯನ್ನು ಮೆಚ್ಚಿ ಈಗಾಗಲೇ 'ಓಕೆ' ಅಂದಿದ್ದಾರಂತೆ. ಆದರೆ ಕಾಂಟ್ರಾಕ್ಟ್ ಗೆ ಇನ್ನೂ ಸಹಿ ಬಿದ್ದಿಲ್ಲ. ಹಾಗಿದ್ದರೂ ಟಬು ಬರೋದಂತೂ ಖಾತ್ರಿಯಾಗಿದೆಯಂತೆ. ಯೋಗರಾಜ್ ಬ್ಯಾನರಿನಲ್ಲಿ ಬರಲಿರುವ ಈ ಸಿನಿಮಾಕ್ಕೆ ಭಟ್ಟರ ಹಳೆಯ ಸಹ ನಿರ್ದೇಶಕ ಮೆಹು ಜೊತೆಯಾಗಲಿದ್ದಾರೆ.
ಹಿರಿಯ ನಟ ಅನಂತ್ ನಾಗ್ ಪ್ರಮುಖ ಪಾತ್ರಧಾರಿ ಎಂಬುದು ಇನ್ನೂ ವಿಶೇಷ ಸಂಗತಿಯಾಗಿದೆ. ಉಳಿದ ತಾರಾಬಳಗದ ಆಯ್ಕೆ ನಡೆಯಬೇಕಾಗಿದ್ದು ಮುಂದಿನ ತಿಂಗಳು ಡಿಸೆಂಬರ್ ನಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆ ದಟ್ಟವಾಗಿದೆ. ಚಿತ್ರಕ್ಕೆ ಹೀರೋ, ಹಿರೋಯಿನ್ ಯಾರಿರಬಹುದೆಂದು ಗಾಂಧಿನಗರ ತಲೆ ಕೆರೆದುಕೊಳ್ಳುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











