»   » ಟಿಪ್ಪು ಸುಲ್ತಾನ್ ಕಥೆ ಆಧಾರಿತ ಅಗ್ನಿ ಶ್ರೀಧರ್ ಚಿತ್ರ

ಟಿಪ್ಪು ಸುಲ್ತಾನ್ ಕಥೆ ಆಧಾರಿತ ಅಗ್ನಿ ಶ್ರೀಧರ್ ಚಿತ್ರ

Subscribe to Filmibeat Kannada

'ಆ ದಿನಗಳು' ಚಿತ್ರ ಶನದಿನೋತ್ಸವ ಪೂರೈಸಿದೆ. ಚಿತ್ರದಲ್ಲಿ ಈಗಾಗಲೇ ಹೆಸರು ಮಾಡಿದ ನಾಯಕ ನಟ, ನಟಿ ಇಲ್ಲ. ಚಿತ್ರತಂಡದಲ್ಲಿ ಇದ್ದದ್ದು ಎಲ್ಲಾ ಹೊಸ ಮುಖಗಳೇ. ಸಾಲದಕ್ಕೆ ಚಿತ್ರದ ಹೆಸರು ಬೇರೆ 'ಆ ದಿನಗಳು' ಎಂದು. ಈ ಎಲ್ಲಾ ಇಲ್ಲ ಸಲ್ಲಗಳ ನಡುವೆಯೂ ಚಿತ್ರ ಗೆದ್ದಿದೆ. ಚಿತ್ರತಂಡಕ್ಕೆ ಖುಷಿಯಾಗಿದೆ. ಆ ದಿನಗಳು ಗೆಲುವಿನಿಂದ ಶ್ರೀಧರ್ ಮತ್ತಷ್ಟು ಚಿತ್ರಗಳನ್ನ್ನು ನಿರ್ಮಿಸಲು ಕೈಹಾಕಿದ್ದಾರೆ.

ಮೇಘಾ ಮೂವೀಸ್ ಎಂಬ ಬ್ಯಾನರ್‌ನಡಿ ಹಲವಾರು ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ ಅಗ್ನಿ ಶ್ರೀಧರ್. ಇಂದಿನಿಂದ(ಫೆ.8) ಅವರ ಹೊಸ ಚಿತ್ರ 'ಸ್ಲಂ ಬಾಲ' ಚಿತ್ರೀಕರಣ ಶುರುವಾಗಿದೆ. ಅಗ್ನಿ ಪತ್ರಿಕೆಯ ಪತ್ರಕರ್ತೆ ಡಿ. ಸುಮನಾ ಕಿತ್ತೂರು 'ಸ್ಲಂ ಬಾಲ' ನಿರ್ದೇಶನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೇ ಮೊದಲ ಬಾರಿಗೆ ಸುಮನಾ ಅವರು ಚಿತ್ರವೊಂದನ್ನ್ನು ನಿರ್ದೇಶಿಸುತ್ತಿರುವುದು. ಚಿತ್ರದ ತಾರಾಗಣದಲ್ಲಿ 'ಸ್ಲಂ ಬಾಲ'ನಾಗಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. 'ಆ ದಿನಗಳು' ಚಿತ್ರದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಗುರುಕಿರಣ್‌ರ ಸಂಗೀತವಿದೆ.

'ಸ್ಲಂ ಬಾಲ' ಚಿತ್ರ ಪೂರ್ಣವಾದ ನಂತರ ಮತ್ತೊಂದು ಚಿತ್ರ 'ಆ ದಿನಗಳು ಭಾಗ 2' ಈ ವರ್ಷಾಂತ್ಯದಲ್ಲಿ ಚಿತ್ರೀಕರಣ ಶುರುವಾಗಲಿದೆ. 'ಆ ದಿನಗಳ'ಲ್ಲಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಭೂಗತ ಲೋಕದ ಡಾನ್ ಕೊತ್ವಾಲ್ ರಾಮಚಂದ್ರನ ವಿಚಿತ್ರ ಮ್ಯಾನರಿಸಂಗಳನ್ನು ಬಿಚ್ಚಿಡಲಾಗಿತ್ತು. ಇದರ ಮುಂದುವರಿದ ಭಾಗದಲ್ಲಿ ಅದೇ ಕಾಲದ ಮತ್ತೊಬ್ಬ ಡಾನ್ ಎಂ.ಪಿ.ಜಯರಾಜ್‌ ಬೆಳ್ಳಿ ತೆರೆಗೆ ಬರಲಿದ್ದಾನೆ.

ಈ ಭೂಗತ ಕಥೆಗಳಿಗೆ ಕೊಂಚ ವಿರಾಮ ಕೊಟ್ಟು, ಟಿಪ್ಪು ಸುಲ್ತಾನನ ಕಥೆ ಕೈಗೆತ್ತಿಕೊಳ್ಳಲಿದ್ದಾರೆ ಶ್ರೀಧರ್ . ಈ ಚಿತ್ರವನ್ನು ನಿರ್ದೇಶಿಸಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್‌ರನ್ನ್ನು ಈಗಾಗಲೇ ಸಂಪರ್ಕಿಸಿದ್ದಾರೆ. ಟಿಪ್ಪು ಸುಲ್ತಾನ್ ಚಿತ್ರಕ್ಕೆ ನ್ಯಾಯ ಒದಗಿಸಬಲ್ಲವರು ಕಾರ್ನಾಡ್ ಮಾತ್ರ. ಈ ಚಿತ್ರವನ್ನು ನಿರ್ದೇಶಿಸಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಿದ್ದೇನೆ ಎನ್ನ್ನುತ್ತಾರೆ ಶ್ರೀಧರ್. ಈ ಕುರಿತು ಕಾರ್ನಾಡ್ ಇನ್ನೂ ಪ್ರತಿಕ್ರಿಯಿಸಿಲ್ಲ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada