»   » ಐಶ್ವರ್ಯ ರೈ ಕೇಳಿದ್ದು ಆರು ಸಿಕ್ಕಿದ್ದು ಒಂದೂವರೆ

ಐಶ್ವರ್ಯ ರೈ ಕೇಳಿದ್ದು ಆರು ಸಿಕ್ಕಿದ್ದು ಒಂದೂವರೆ

Subscribe to Filmibeat Kannada

ಮಂಗಳೂರು ಹುಡುಗಿ, ಬಾಲಿವುಡ್ ಬೆಡಗಿ , ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ರೊಬೊಟ್ ಚಿತ್ರದಲ್ಲಿ ನಟಿಸಲು ಕೇಳಿದ ಸಂಭಾವನೆ ಮೊತ್ತ 6 ಕೋಟಿ. ಆದರೆ ಈಗ ಕೇವಲ ಒಂದೂವರೆ ಕೋಟಿ ರುಗಳಿಗೆ ನಟಿಸಲು ಒಪ್ಪಿಗೆಯಿತ್ತಿದ್ದಾರೆ. ರಜನಿಕಾಂತ್ ಅಭಿನಯದ ರೊಬೊಟ್ ಚಿತ್ರವನ್ನು ಜಂಟಲ್ ಮ್ಯಾನ್ ಚಿತ್ರ ಖ್ಯಾತಿಯ ಶಂಕರ್ ನಿರ್ದೇಶಿಸುತ್ತಿದ್ದಾರೆ.

ವಿಜ್ಞಾನ ಕೌತುಕಮಯ ಈ ಚಿತ್ರ ಹಲವಾರು ಕಾರಣದಿಂದ ಕುತೂಹಲ ಕೆರಳಿಸುತ್ತಿದೆ. ಸುಮಾರು 120 ರಿಂದ 140 ಕೋಟಿ ಬಜೆಟ್ ನ ರೊಬೋಟ್ ಚಿತ್ರವನ್ನು ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಲಂಡನ್ ಮೂಲದ ಕರುನಾಸ್ ಐಂಗರನ್ ಇಂಟರ್ ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದೆ.

ಮೇ ಕೊನೆವಾರದೊಳಗೆ ಚಿತ್ರೀಕರಣ ಮುಗಿಯುವ ಸಾಧ್ಯತೆಗಳಿದೆ. ಸದ್ಯ ಬಾಲಿವುಡ್ ನಲ್ಲಿ 2 ಕೋಟಿ ಹಾಗೂ ಹಾಲಿವುಡ್ ಚಿತ್ರಗಳಿಗೆ 4 ಕೋಟಿ ರು ಗಳಿಸುತ್ತಿರುವ ಐಶ್, ಏಕಾಏಕಿ 6 ಕೋಟಿ ಕೇಳುತ್ತಿರುವುದು ನಿರ್ಮಾಪಕರಿಗೆ ಅಚ್ಚರಿ ತಂದಿತ್ತು. ಆದರೆ ನಿರ್ದೇಶಕ ಶಂಕರ್ ಮಾಜಿ ವಿಶ್ವಸುಂದರಿಯನ್ನು ಒಂದೂವರೆ ಕೋಟಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಕಡಿಮೆ ಸಂಭಾವನೆಗೆ ಐಶ್ ಒಪ್ಪಿಕೊಳ್ಳಲು ಚಿತ್ರದ ಕಥೆಯೇ ಕಾರಣ ಎಂದು ಶಂಕರ್ ಹೇಳಿದರೂ, ಸಂಭಾವನೆ ವಿಷಯದಲ್ಲಿ ರಾಜಿಯಾಗದ ಐಶ್ ಇಷ್ಟು ಚಿಕ್ಕ ಮೊತ್ತಕ್ಕೆ ಒಪ್ಪಿರುವುದು ಬಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ರೊಬೊಟ್ ಚಿತ್ರದ ತಾರಾಗಣಕ್ಕೆ ಶ್ರೀಯಾ, ದೀಪಿಕಾ, ಕತ್ರೀನಾ ತನಕ ಎಲ್ಲರ ಹೆಸರುಗಳು ಬಂದು ಕೊನೆಗೆ ಮಾಜಿ ವಿಶ್ವ ಸುಂದರಿಗೆ ಅವಕಾಶ ದೊರೆತಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada