ಅಜಯ್ ರಾವ್ ಹೊಸ ಚಿತ್ರ ಕೃಷ್ಣ ಸನ್ ಆಫ್ ಸಿಎಂ
ಈಗಾಗಲೆ ಕೃಷ್ಣನ ಹೆಸರಿನಲ್ಲಿ ಎರಡು ಹಿಟ್ ಚಿತ್ರಗಳನ್ನು ನೀಡಿರುವ ಅಜಯ್ ರಾವ್ ಮತ್ತೊಮ್ಮೆ ಕೃಷ್ಣನಾಗಿ ಕಾಣಿಸಲಿದ್ದಾರೆ. ಈ ಹಿಂದೆ 'ಕೃಷ್ಣನ್ ಲವ್ ಸ್ಟೋರಿ' ಹಾಗೂ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಎಂಬ ಎರಡು ವಿಭಿನ್ನ ಚಿತ್ರಗಳಲ್ಲಿ ಅಜಯ್ ಅಭಿನಯಿಸಿದ್ದರು.
ಈಗ ಮತ್ತೊಮ್ಮೆ ಕೃಷ್ಣನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಜಯ್ ರಾವ್ ಹೊಸ ಚಿತ್ರಕ್ಕೆ 'ಕೃಷ್ಣ ಸನ್ ಆಫ್ ಸಿಎಂ' ಎಂದು ಹೆಸರಿಡಲಾಗಿದೆ. ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಯೋಗಿಶ್ ಹುಣಸೂರು ನಿರ್ಮಿಸುತ್ತಿದ್ದಾರೆ.
ಈ ಬಾರಿ ಕೃಷ್ಣ ತಂದೆಗೆ ತಕ್ಕ ಮಗ ಎನ್ನಿಸಿಕೊಳ್ಳಲಿದ್ದಾರೆ. ಲವ್ವು ಡವ್ವು ಎಂದು ಹುಡುಗೀರ ಹಿಂದೆ ಬೀಳದೆ ಅಪ್ಪನಿಗೆ ಒಳ್ಳೆಯ ಹೆಸರು ತರುವ ಪಾತ್ರ. ಚಿತ್ರದ ಮೊದಲಾರ್ಧ ಲವ್ಲಿಯಾಗಿ ಸಾಗುತ್ತದೆ. ಉಳಿದರ್ಧ ಆಕ್ಷನ್‌ಮಯ ಎಂದಿದ್ದಾರೆ ಅಜಯ್ ರಾವ್.
ಚಿತ್ರದಲ್ಲಿ ಸಿಎಂ ಎಂದರೆ ಮುಖ್ಯಮಂತ್ರಿಯಲ್ಲ. ಕಾಮನ್ ಮ್ಯಾನ್ ಆಗಬಹುದು ಅಥವಾ ಚೇರ್‌ಮೆನ್ ಆಗಬಹುದು ಅಥವಾ ಏನಾದರೂ ಆಗಬಹುದು ಎನ್ನುತ್ತಾರೆ ಎಂ ಎಸ್ ರಮೇಶ್. ಪಾತ್ರವರ್ಗದಲ್ಲಿ ರಂಗಾಯಣ ರಘು, ಅವಿನಾಶ್, ಮಾಲತಿ ಸರದೇಶಪಾಂಡೆ ಮುಂತಾದವರಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. (ಏಜೆನ್ಸೀಸ್)


Click it and Unblock the Notifications











