ಕನ್ನಡಕ್ಕೆ ಖಳನಟನಾಗಿ ಸಲ್ಮಾನ್ ಖಾನ್ ತಮ್ಮ ಅರ್ಬಾಜ್

By Rajendra

ಕನ್ನಡದಲ್ಲಿ ಭಾರಿ ಬಜೆಟ್ ಚಿತ್ರಗಳನ್ನು ನಿರ್ಮಿಸುವುದು ಬಲು ಅಪರೂಪ. ಅಂತಹದ ಒಂದು ಅಪರೂಪದ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ದಿನೇಶ್ ಗಾಂಧಿ. ಚಿತ್ರದ ಹೆಸರು ಛತ್ರಪತಿ. ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್‌ಗಾಂಧಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರವಿದು.

ಈ ಚಿತ್ರಕ್ಕೆ ಖಳನಾಯಕನಾಗಿ ಸಲ್ಮಾನ್ ಖಾನ್ ತಮ್ಮ ಅರ್ಬಾಜ್ ಖಾನ್ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಖ್ಯಾತ ನಟಿ ಭಾನುಪ್ರಿಯ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಸಿದ್ದಾಂತ್(ಎ.ಕೆ.56) ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರ ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ನಾಯಕಿಯ ಆಯ್ಕೆ ನಡೆಯುತ್ತಿದೆ.

ಸದ್ಯಕ್ಕೆ 'ಛತ್ರಪತಿ'ಗೆ ಕೇರಳದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕಣ್ಣೂರಿನ ಕಡಲತೀರದಲ್ಲಿ ಐನೂರು ಮನೆಗಳ ಅದ್ದೂರಿ ಸೆಟ್ ನಿರ್ಮಿಸಲಾಗಿದೆ. ಈ ಸೆಟ್ ನಿರ್ಮಾಣಕ್ಕೆ ಸುಮಾರು ಎರಡು ಕೋಟಿ ಖರ್ಚಾಗಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಮೂರು ಸಾಹಸ ಸನ್ನಿವೇಶಗಳು 3ಡಿ ಎಫೆಕ್ಟ್‌ನಲ್ಲಿ ಮೂಡಿ ಬರಲಿದೆ.

ಚಿತ್ರದ ನಿರ್ದೇಶಕರೂ ಆಗಿರುವ ದಿನೇಶ್‌ಗಾಂಧಿ ಎ.ಆರ್.ಬಾಬು ಅವರೊಟ್ಟಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದಾಸರಿಸೀನು ಛಾಯಾಗ್ರಹಣವಿದೆ. ಎಸ್.ಮನೋಹರ್ ಸಂಕಲನ, ಇಸ್ಮಾಯಿಲ್ ಕಲಾ ನಿರ್ದೇಶನ ಹಾಗೂ ಪ್ರದೀಪ್ ಅಂಥೋನಿ ನೃತ್ಯ ನಿರ್ದೇಶನ 'ಛತ್ರಪತಿ' ಚಿತ್ರಕ್ಕಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Bollywood actor Salman Khan brother Arbaaz Khan debuts in Kannada as villain. He is acting in a Kannada movie Chatrapati by Dinesh Gandhi. The heroine of the movie is yet to be confirmed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X