ಕೃಷ್ಣ ಸುಂದರಿ ಬಿಪಾಶಾ ಬಸು 'ಅರ್ಧ ಕುಂಭ' ದರ್ಶನ
ಇದು ಸೊಂಟದ ಕೆಳಗಿನ ವಿಷಯ ಅಲ್ಲ, ಮೇಲಿನ ವಿಷಯ! ದೇಶದಾದ್ಯಂತ ಕೊರೆಯುವ ಚಳಿಯಲ್ಲೂ ಬಾಲಿವುಡ್ ತಾರೆಗಳು ಬೆತ್ತಲಾಗುವ ಮೂಲಕ ಪಡ್ಡೆಗಳನ್ನು ಬೆಚ್ಚಗಾಗಿಸುವ ಪುಣ್ಯದ ಕೆಲಸಕ್ಕೆ ಮುಂದಾಗಿದ್ದಾರೆ. ಮಂದಿರಾ ಬೇಡಿಗಿಂತ ನಾನೇನು ಕಮ್ಮಿ ಎಂಬಂತೆ ಈ ಬಾರಿಯ ಮ್ಯಾಕ್ಸಿಮ್ ನಿಯತಕಾಲಿಕೆಗೆ ಕೃಷ್ಣ ಸುಂದರಿ ಬಿಪಾಶಾ ಬಸು "ಅರ್ಧ ಕುಂಬ" ದರ್ಶನ ಮಾಡಿಸಿದ್ದಾರೆ.
ಅಂತಾರಾಷ್ಟ್ರೀಯ ನಿಯತಕಾಲಿಕೆ ಮ್ಯಾಕ್ಸಿಮ್ ತನ್ನ ಲೇಟೆಸ್ಟ್ ಸಂಚಿಕೆಯಲ್ಲಿ ಓದುಗರಿಗೆ ಕಣ್ಣು ತಂಪು ಮಾಡುವ ಕೆಲಸ ಮಾಡಿದೆ. ತನ್ನ ಮುಖಪುಟದಲ್ಲಿ ಬಿಪಾಶಾ ಬಸು ಅವರ ಅರೆ ಬೆತ್ತಲೆ ಚಿತ್ರವನ್ನು ನೀಡಿ ಗಮನ ಸೆಳೆದಿದೆ. ತನ್ನ ಪ್ರಿಯತಮ ಜಾನ್ ಅಬ್ರಹಾಂ ಜೊತೆಗಿನ 'ಜಿಸಂ' ಚಿತ್ರದದಲ್ಲಿ ಬಿಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಂತರ ಬಿಪ್ಸ್ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು.
ಕೆಲ ವರ್ಷಗಳ ಹಿಂದೆ ಈಕೆಯ ವಿಡಿಯೋ ಒಂದು ಯೂಟ್ಯೂಬ್ ನಲ್ಲಿ ಲೀಕ್ ಆಗಿ ಸಖತ್ ಸುದ್ದಿ ಆಗಿತ್ತು. ಹೊಸ ವರ್ಷಾಚರಣೆಯ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಲು ಹೆಚ್ಚುಕಮ್ಮಿ ಎರಡು ಕೋಟಿ ತೆಗೆದುಕೊಳ್ಳುವ ಬಿಪ್ಸ್ ಈ ಮೈಮಾಟ ಪ್ರದರ್ಶನಕ್ಕೆ ಎಷ್ಟು ಸಂಭಾವನೆ ತೆಗೆದುಕೊಂಡಿರಬಹುದು ಎನ್ನುವ ಬಗ್ಗೆ ಪಕ್ಕಾ ಮಾಹಿತಿಯಿಲ್ಲ. [ಬಿಪಾಶಾ ಬಸು]


Click it and Unblock the Notifications











