twitter
    For Quick Alerts
    ALLOW NOTIFICATIONS  
    For Daily Alerts

    ಕಾಂಚನಾ ಚಿತ್ರ ನೋಡಿ ಆತ್ಮಹತ್ಯೆಗೆ ಶರಣಾದ ಬಾಲಕ

    By Rajendra
    |

    ದೆವ್ವ, ಭೂತ, ಪಿಶಾಚಿ ಚಿತ್ರಗಳನ್ನು ನೋಡಿ ಸಿಕ್ಕಾಪಟ್ಟೆ ಚಳಿಜ್ವರ ಬಂದು ಹಾಸಿಗೆ ಹಿಡಿದವರನ್ನು ನೋಡಿರುತ್ತೀರಿ. ಆದರೆ ದೆವ್ವದ ಚಲನಚಿತ್ರ ನೋಡಿ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಈರೋಡಿನಲ್ಲಿ ನಡೆದಿದೆ. ಹದಿನೈದು ವರ್ಷದ ಇಲವರಸನ್ ಎಂಬ ಬಾಲಕನೇ ಆತ್ಮಹತ್ಯೆಗೆ ಶರಣಾದ ದುರ್ದೈವಿ.

    ರಾಘವ ಲಾರೆನ್ಸ್ ನಿರ್ದೇಶನದ ಹಾರರ್ ಚಿತ್ರ 'ಕಾಂಚನಾ' ನೋಡಿದ ಈತ ದೆವ್ವದ ಭಯದಲ್ಲಿ ನರಳುತ್ತಿದ್ದ ಎನ್ನಲಾಗಿದೆ. ಕಡೆಗೆ ಈತ ಆ ಭಯದಿಂದ ಹೊರಬರಲು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಚಿತ್ರದಲ್ಲಿ ಬೆಳಗಾವಿ ಬೆಡಗಿ ಲಕ್ಷ್ಮಿ ರೈ ಪ್ರಮುಖ ಪಾತ್ರ ಪೋಷಿಸಿರುವುದು ಗೊತ್ತೆ ಇದೆ.

    ಹಾರರ್ ಹಾಗೂ ಕಾಮಿಡಿ ಪ್ರಧಾನ ಚಿತ್ರವಾದ ಕಾಂಚನಾ ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿತ್ತು. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಚಿತ್ರ ನಿಷೇಧಿಸಲಾಗಿತ್ತು. ಹಾಗಿದ್ದ್ದರೂ ಈ ಬಾಲಕನಿಗೆ ಕಾಂಚನಾ ಚಿತ್ರ ನೋಡಲು ಹೇಗೆ ಅವಕಾಶ ನೀಡಲಾಯಿತು ಎಂಬ ಚರ್ಚೆ ನಡೆಯುತ್ತಿದೆ. (ಏಜೆನ್ಸೀಸ್)

    English summary
    15 years old boy Ilavarasan has committed suicide on Tuesday in Erode. According to reports, the boy was suffered in ghost fear after seen the Ragava Lawrence Horror comedy Kanchana.
    Thursday, September 8, 2011, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X