»   » ಉಪೇಂದ್ರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಸೆಲೀನಾ

ಉಪೇಂದ್ರ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಸೆಲೀನಾ

Subscribe to Filmibeat Kannada
Celina in Sandalwood
ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ಸೆಲಿನಾ ಜೈಟ್ಲಿ ಕನ್ನಡಕ್ಕೆ ಬರುತ್ತಿದ್ದಾರೆ.ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಸೆಲಿನಾ ಜೈಟ್ಲಿ ನಟಿಸಲಿದ್ದಾರೆ.

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ಸೆಟ್ಟೇರಲಿದೆಯಂತೆ.ಈಗಾಗಲೇ ಉಪೇಂದ್ರ ಕಥೆ ಹಾಗೂ ಚಿತ್ರಕಥೆಯನ್ನು ಎರಡು ಭಾಷೆಗಳಲ್ಲಿ ಸಿದ್ಧಪಡಿಸಿದ್ದಾರೆ.2004ರಲ್ಲಿ ತೆರೆಕಂಡ 'ಸೂರ್ಯಂ' ಎಂಬ ಚಿತ್ರದಲ್ಲಿ ಸೆಲಿನಾ ಜೈಟ್ಲಿ ನಟಿಸಿದ್ದರು ನಂತರ ಆಕೆ ದಕ್ಷಿಣ ಭಾರತದ ಕಡೆ ಮುಖ ಮಾಡಿರಲಿಲ್ಲ. ನಾಲ್ಕು ವರ್ಷಗಳ ನಂತರ ಈಗ ಮತ್ತೆ ದಕ್ಷಿಣದ ಕಡೆ ತಲೆಹಾಕಿದ್ದಾರೆ. ವಿದೇಶಿ ಚಿತ್ರ 'Love Has No Language'ಎಂಬ ಚಿತ್ರವೂ ಸೇರಿದಂತೆ ಬಾಲಿವುಡ್ ನ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟಿ.

ಪ್ರಸ್ತುತ ಸೆಲಿನಾ ಜೈಟ್ಲಿ ಅರೇಬಿಯನ್ ನೈಟ್ಸ್ ಕಥೆಯಾಧಾರಿತ ಹಾಲಿವುಡ್ ನ Quest of Sheherzadein ಎಂಬ ಚಿತ್ರದಲ್ಲಿ ಇರಾನ್ ರಾಣಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನ 'ಅಪ್ನ ಸಪ್ನ ಮನಿಮನಿ' ಚಿತ್ರದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಈ ಬಾಲಿವುಡ್ ಸುಂದರಿ ಕನ್ನಡ ಚಿತ್ರರಂಗದಲ್ಲೂ ಬಿರುಗಾಳಿ ಎಬ್ಬಿಸಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.

ಸೆಲೀನಾ ಜೈಟ್ಲಿ ಅವರ ತಂದೆ ಮಾಜಿ ಭಾರತೀಯ ಸೈನ್ಯಾಧಿಕಾರಿ, ಅವರ ತಾಯಿ ಮಕ್ಕಳ ಮನಃಶಾಸ್ತ್ರಜ್ಞೆ. ಹುಟ್ಟಿದ್ದು ಪಂಜಾಬ್ ನಲ್ಲಿ ಬೆಳೆದದ್ದು ಕೋಲ್ಕತ್ತಾದಲ್ಲಿ. ಭಾರತೀಯ ಸೈನ್ಯದಲ್ಲಿ ವೈದ್ಯೆ ಅಥವಾ ಪೈಲೆಟ್ ಆಗಬೇಕು ಎಂದು ಕನಸು ಕಾಣುತ್ತಿದ್ದ ಸೆಲೀನಾ ಕೊನೆಗೆ ಅಪ್ಪಿಕೊಂಡಿದ್ದು ಬಾಲಿವುಡ್ ಚಿತ್ರಜಗತ್ತನ್ನು. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ವಾಣಿಜ್ಯ ಪದವೀಧರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಾದಕ ಚೆಲುವೆ ಸೆಲಿನಾ ಜೇಟ್ಲಿ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada