»   » ದರ್ಶನ್ ಬದಲಾಗಿದ್ದಾರೆ, ಕರೆದಲ್ಲೆಲ್ಲಾ ಬರ್ತಾರೆ, ನಿಜಾನಾ!

ದರ್ಶನ್ ಬದಲಾಗಿದ್ದಾರೆ, ಕರೆದಲ್ಲೆಲ್ಲಾ ಬರ್ತಾರೆ, ನಿಜಾನಾ!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜವಾಗಿಯೂ ಸಾಕಷ್ಟು ಬದಲಾಗಿದ್ದಾರೆ ಎನ್ನುತ್ತಿವೆ ಎಲ್ಲಾ ಸುದ್ದಿಮೂಲಗಳು. ಮೊದಲೆಲ್ಲಾ ದರ್ಶನ್ ಅವರ ಚಿತ್ರಗಳ ಮುಹೂರ್ತ ಹಾಗೂ ಅವರ ಕಾರ್ಯಕ್ರಮಗಳಿಗೆ ಮಾತ್ರ ಹಾಜರಾಗುತ್ತಿದ್ದರು. ಆದರೆ ಈಗ ಹಾಗಲ್ಲ, ಕರೆದಲ್ಲೆಲ್ಲಾ ಹೋಗುತ್ತಿದ್ದಾರೆ, ತಮ್ಮ ಕಾರ್ಯಕ್ರಮ, ಬೇರೆಯವರ ಕಾರ್ಯಕ್ರಮ ಎಂಬ ಬೇಧಭಾವ ತೋರಿಸುತ್ತಿಲ್ಲ ಎನ್ನಲಾಗುತ್ತಿದೆ.

ಅದರಲ್ಲೂ ದರ್ಶನ್ ಹಾಗೂ ಸುದೀಪ್ ಎಲ್ಲಾ ಕಡೆ ಒಟ್ಟಾಗಿ ಹೋಗುವ ಪರಿಪಾಠ ಹೆಚ್ಚುತ್ತಿದೆ. ಚಿಂಗಾರಿ ಚಿತ್ರದ ಆಡಿಯೋ ಬಿಡುಗಡೆಯಿಂದ ಪ್ರಾರಂಭವಾದ ಕಿಚ್ಚ-ಚಾಲೆಂಜಿಂಗ್ ಸ್ಟಾರ್ ಜೋಡಿ, ಮೊನ್ನೆ ನಾಗತಿಹಳ್ಳಿ ಮೇಸ್ಟ್ರ ಚಿತ್ರ 'ಬ್ರೇಕಿಂಗ್ ನ್ಯೂಸ್' ಆಡಿಯೋ ಬಿಡುಗಡೆಗೆ ಒಟ್ಟಾಗಿ ಹೋಗುವವರೆಗೂ ಮುಂದುವರಿದಿದೆ.

ಕ್ರಿಕೆಟ್ ಇರಲಿ, ಸಮಾರಂಭವಿರಲಿ, ಅಥವಾ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿರಲಿ ದರ್ಶನ್ ಸುದೀಪ್ ಬರುತ್ತಿದ್ದಾರೆ, ಸಿನಿಮಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ನೋಡಲು ಬರುತ್ತಿದ್ದಾರೆ. ಎಲ್ಲೇ ಹೋದರೂ ದರ್ಶನ್ ಹಾಟ್ ಫೇವರೆಟ್ ಎಂಬಂತಾಗಿದೆ. ದರ್ಶನ್ ಜೊತೆ ಸುದೀಪ್ ಇರುವುದು ಅಚ್ಚರಿಯ ಬೆಳವಣಿಗೆ ಎಂಬಂತಾಗಿದೆ. ಚಿತ್ರರಂಗಕ್ಕೆ ಖುಷಿಯ ವಿಚಾರವಾಗಿರುವ ಈ ಬೆಳವಣಿಗೆ ನಿರಂತರವಾಗಿರಲಿ ಎಂಬುದು ಸಿನಿಅಭಿಮಾನಿಗಳ ಹಾರೈಕೆ. (ಒನ್ ಇಂಡಿಯಾ ಕನ್ನಡ)

English summary
Challenging Star Darshan attends more and more functions in these days. Kichcha Sudeep also joins Darshan. This is called good development in Sandalwood. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X