»   » ಶುಭಾ ಪುಂಜಾ ಜೊತೆ ಕುಶಲೋಪರಿ

ಶುಭಾ ಪುಂಜಾ ಜೊತೆ ಕುಶಲೋಪರಿ

Posted By:
Subscribe to Filmibeat Kannada
Shubha Punja
ವಿಜಯ್‌ನಿಂದ ನೀವೇನು ಕಲಿತಿರಿ...' ಫೋನಿನಲ್ಲೇ ಚಿಮ್ಮಿದ ಪ್ರಶ್ನೆಗೆ ಕ್ಷಣಕಾಲ ಶುಭಾ ಪೂಂಜಾ ವಿಚಲಿತರಾದರು. ಆಮೇಲೆ, ಆಂ... ರಿಪೀಟ್ ಮಾಡಿ' ಅನ್ನುವ ದನಿ. ಪ್ರಶ್ನೆ ರಿಪೀಟ್ ಆಗುವಷ್ಟರಲ್ಲಿ ಅವರ ಮನಸ್ಸಲ್ಲೇ ಉತ್ತರ ಸಿದ್ಧವಾಯಿತು. 'ಅವರ ಡೆಡಿಕೇಷನ್ ನಂಗಿಷ್ಟ' ಅಂತ ಮುಗುಮ್ಮಾದರು.'ಅಷ್ಟೇನಾ...' ಪ್ರಶ್ನೆಯನ್ನು ಮುಂದುವರಿಸುವ ಚೇಷ್ಟೆ ನಮ್ಮದು. ಶುಭಾ ಹುಳ್ಳಗೆ ನಕ್ಕು ಪೂರ್ಣವಿರಾಮ ಹಾಕಿದರು.

*ಜಯಂತಿ

ಸದ್ಯಕ್ಕೆ ಶುಭಾ ಜೊತೆ ಅವರಮ್ಮ ಇದ್ದಾರೆ. ಅಪ್ಪಿತಪ್ಪಿ ಕೂಡ ಅವರು ವಿಜಯ್ ಹೆಸರನ್ನು ಅನಗತ್ಯವಾಗಿ ಎತ್ತದಷ್ಟು ಜಾಣೆಯಾಗಿದ್ದಾರೆ. ಅವರಿಬ್ಬರ ನಡುವೆ ಅಫೇರ್ ಇದೆ ಎಂಬುದೀಗ ಬಂಡವಾಳವಾಗುತ್ತಿರುವುದರ ಕುರಿತು ಹೆಮ್ಮೆಯಿದೆಯಾ? ಗೊತ್ತಿಲ್ಲ. ಸದ್ಯಕ್ಕೆ ವಿಜಯ್ ಅಂಡ್ ಐ ಮೇಕ್ ಎ ವೆರಿ ಗುಡ್ ಪೇರ್' ಅಂತ ಮಂಗಳೂರು ಶೈಲಿಯ ಇನ್ನೊಂದು ನಗು ಬಿಸಾಕುತ್ತಾರೆ ಶುಭಾ. ಅವರ ಈ ನಗುವಿಗೆ ಸಲ್ಲುತ್ತಿರುವ ಸಂಭಾವನೆ ಮಾತ್ರ ಗುಟ್ಟು. ಆದರೆ, ವಿಜಯ್ ಆಯ್ಕೆಯಾಗುವ ಸಿನಿಮಾ ನಾಯಕಿ ಯಾರೆಂಬ ಪ್ರಶ್ನೆ ಹುಟ್ಟುವುದೇ ತಡ, ಉತ್ತರರೂಪದಲ್ಲಿ ಮೊದಲು ಶುಭೋ'ದಯ!

ಹೌದು, ಒಂದು ಜಮಾನದ್ಲಲಿ ಅನಂತನಾಗ್-ಲಕ್ಷ್ಮಿ, ಶ್ರೀನಾಥ್-ಆರತಿ, ರಾಜಣ್ಣ-ಭಾರತಿ ಅಂತ ಭಲೇ ಜೋಡಿ'ಗಳನ್ನು ಜನ ಗುರುತಿಸುತ್ತಿದ್ದಂತೆ ಈಗ ಗಾಂಧಿನಗರ ವಿಜಯ್-ಶುಭಾ ಪೂಂಜಾ ಕಡೆ ನೋಡುತ್ತಿದೆ. ಅವರಿಬ್ಬರ ನಡುವೆ ಕೆಮಿಸ್ಟ್ರಿ ಚೆನ್ನಾಗಿದೆ. ಹಾಗಾಗಿ ಸಿನಿಮಾ ಚೆನ್ನಾಗಿ ಬರುತ್ತೆ. ಎಲ್ಲಾ ರಿಯಲ್ ತರಹ...' ಅಂತ ಹತ್ತಿರದಿಂದ ಅವರನ್ನು ನೋಡಿದ ಸಿನಿಕರ್ಮಿಯೊಬ್ಬರು ಕುಹಕ ನಗೆ ಬೆರೆಸಿ ಹೇಳಿಕೊಂಡಿದ್ದರು.

ಶುಭಾಗೆ ಕಾಡು ಇಷ್ಟ. ಹುಲಿ ಇಷ್ಟ. ಬೀದಿ ನಾಯಿಗಳು ಇಷ್ಟ. ಒಂಬತ್ತು ಬೀದಿನಾಯಿಗಳನ್ನು ಅವರು ಸಾಕುತ್ತಿದ್ದಾರೆ. ಇಷ್ಟೆಲ್ಲಾ ಇಷ್ಟವಾದ ಮೇಲೆ ವಿಜಯ್ ಕೂಡ ಮೆಚ್ಚಾಗುವುದರಲ್ಲಿ ಅಚ್ಚರಿಯೇನಿದೆ ಅಂತ ಕೆಲವರು ಕುಚೋದ್ಯವಾಡುತ್ತಿದ್ದಾರೆ! ಶುಭಾ ಅವರದ್ದು ಮಾತ್ರ ಡೋಂಟ್ ಕೇರ್ ಸ್ವಭಾವ. ಅಂದಹಾಗೆ, ತಾಕತ್' ಚಿತ್ರದಲ್ಲಿವಿಜಯ್ ಕ್ಲೀನರ್. ಅವರಿಗೆ ಇದೇ ಶುಭಾ ಜೋಡಿ. ಶುಭವಾಗುತೈತೆ ಎನ್ನೋದು ಚಿತ್ರತಂಡದ ನುಡಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada