ಹೊಸ ಬಾಳಿನ ಹೊಸಿಲಲಿ ಸಿನಿ ಪತ್ರಕರ್ತ ಶ್ಯಾಂ ಪ್ರಸಾದ್

By Rajendra

Shyam Prasad marries Vasudha
ಜನಪ್ರಿಯ ಇಂಗ್ಲಿಷ್ ದೈನಿಕ 'ಬೆಂಗಳೂರು ಮಿರರ್' ಸಿನಿಮಾ ಪತ್ರಕರ್ತ ಶ್ಯಾಂ ಪ್ರಸಾದ್ ಮದುವೆ ವಸುಧಾ ಅವರೊಂದಿಗೆ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಭಾನುವಾರ(ಫೆ.6) ನೆರವೇರಿತು. ತುಮಕೂರು ಜಿಲ್ಲೆಯ ಪ್ರಸಿದ್ಧ ಯಾತ್ರ ಸ್ಥಳ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿರುವ ಸಿದ್ಧೇಶ್ವರ ಕೃಪಾ ಕಲ್ಯಾಣ ಮಂಟಪದಲ್ಲಿ ಶ್ಯಾಂ ಮತ್ತು ವಸುಧಾ ಅವರ ನೂತನ ದಾಂಪತ್ಯಕ್ಕೆ ಅಡಿಯಿಟ್ಟರು.

ಶ್ಯಾಂ ಪ್ರಸಾದ್ ವೃತ್ತಿಯಲ್ಲಿ ಪತ್ರಕರ್ತರಾದರೂ ಅವರು ಓದಿದ್ದು ಮಾತ್ರ ಕಾನೂನು ಪದವಿ. ಅವರ ಬಾಳಿನ ಸಂಗಾತಿಯಾದ ವಸುಧಾ ಅವರೂ ಕಾನೂನು ಪದವೀಧರೆ. ಸ್ನೇಹಿತರು, ಬಂಧು ಮಿತ್ರರು ಶ್ಯಾಂ ಪ್ರಸಾದ್ ಅವರಿಗೆ ಶುಭ ಹಾರೈಸಿದರು. ಇದೇ ಫೆಬ್ರವರಿ 13ರಂದು ಮದುವೆ ಆರತಕ್ಷತೆ ಶ್ಯಾಂ ಹಮ್ಮಿಕೊಂಡಿದ್ದಾರೆ.

ಚಿತ್ರರಂಗದ ಅನೇಕ ಗಣ್ಯರು ಶ್ಯಾಂ ಮದುವೆಗೆ ಆಗಮಿಸಿದ್ದದ್ದು ವಿಶೇಷ. ಅವರಲ್ಲಿ ಮುಖ್ಯವಾಗಿ ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ನಿರ್ದೇಶಕ ಆರ್ ಚಂದ್ರು, ನಟ ಕಿಶೋರ್ ಸೇರಿದಂತೆ ಬೆಂಗಳೂರು ಮಿರರ್ ಪತ್ರಿಕೆಯ ಸಹೋದ್ಯೋಗಿಗಳು ನೂತನ ದಂಪತಿಗಳನ್ನು ಶುಭ ಕೋರಿದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಶ್ಯಾಂ ಪ್ರಸಾದ್ ಅವರಿಗೆ ದಟ್ಸ್ ಕನ್ನಡ ಪರವಾಗಿ ಅಭಿನಂದನೆಗಳು.

More from Filmibeat

English summary
Bangalore's popular daily Bangalore Mirror cine reporter Shyam Prasad steps into married life on Sunday (6th Feb 2011). He married Vasudha in the traditional system at Siddeswhara Krupa Hall in Yediyur Siddalingeswhara temple. Both the couple were law graduates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X