ದರ್ಶನ್ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು!

ನಂತರ ಮನೆಗೆ ತೆರಳಿದ ದರ್ಶನ್ ತಮ್ಮನ್ನು ನೋಡಲು ನೆರದಿರುವ ಅಭಿಮಾನಿಗಳನ್ನು ಕಂಡು ಮೂಕವಿಸ್ಮಿತರಾದರು. ಆಗಲೇ ಪೊಲೀಸರಿಂದ ಲಾಠಿ ಏಟು ತಿಂದಿದ್ದರೂ ಅಭಿಮಾನಿಗಳು ಕದಲದೇ ನಿಂತಿದ್ದರು. ಪತ್ನಿ ವಿಜಯಲಕ್ಷ್ಮಿ ಜೊತೆ ಮನೆಯ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳ ದರ್ಶನ್ 'ದರ್ಶನ' ನೀಡಿದರು. ಹೂವು, ಹಾರಗಳನ್ನು ದರ್ಶನ್ ಕಡೆ ಎಸೆದು ಸಂಭ್ರಮಿಸುವ ದೃಶ್ಯ ಅಲ್ಲಿ ಮನೆಮಾಡಿತ್ತು.
ದರ್ಶನ್ ದಂಪತಿಗಳು ಅಭಿಮಾನಿಗಳನ್ನು ನಿರಾಸೆಗೊಳಿಸದೇ ಎದುರಿನಲ್ಲಿ ಸಿಕ್ಕಷ್ಟು ಜನರಿಗೆ ಹಸ್ತಲಾಘವ ಮಾಡಿ ಮತ್ತೆ 'ದರ್ಶನ' ಕೊಡುವುದಾಗಿ ಹೇಳಿ ಬಾಲ್ಕಿನಿಯಿಂದ ಮನೆಯೊಳಗೆ ಸೇರಿ ಮರೆಯಾದರು. ಅಭಿಮಾನಿಗಳು ಮತ್ತೆ ಬಂದೇ ಬರುತ್ತೇವೆ ಎಂದು ಕೂಗುತ್ತಾ ಹೋಗುತ್ತಿದ್ದುದು ಎಲ್ಲೆಡೆ ಕೇಳಿ ಬರುತ್ತಿತ್ತು. ದಂಪತಿಗಳು ಅಭಿಮಾನಿಗಳ ಎದುರಿಗೇ ಪರಸ್ಪರ ಸಿಹಿ ಹಂಚಿಕೊಂಡಿದ್ದು ವಿಶೇಷವಾಗಿತ್ತು. (ಒನ್ ಇಂಡಿಯಾ ಕನ್ನಡ)
More from Filmibeat
English summary
Challenging Star Darshan is released and went to the temple Rajarajeshwari, near his house. Then he appeared in front of his fans.


Click it and Unblock the Notifications











