ದರ್ಶನ್ ಫ್ಯಾನ್ಸ್ ನೂಕು ನುಗ್ಗಲು ಕಾಂಪೌಂಡ್ ಗೋಡೆ ಕುಸಿತ

ಬೆಳಗ್ಗೆಯಿಂದಲೇ ರಾಜರಾಜೇಶ್ವರಿ ನಗರದ ದರ್ಶನ್ ನಿವಾಸದ ಎದುರು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಮಧ್ಯಾಹ್ನದ ವೇಳೆಗೆ ಅಭಿಮಾನಿಗಳ ಸಂಖ್ಯೆ ದುಪ್ಪಾಟ್ಟಾಗಿತ್ತು. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ದರ್ಶನ್‌ರನ್ನು ನೋಡಲು ಅಭಿಮಾನಿಗಳು ಅಕ್ಕಪಕ್ಕದ ಮನೆಗಳ ಕಾಂಪೌಂಡ್ ಗೋಡೆ ಹತ್ತಿಕುಳಿದಿದ್ದರು. ದರ್ಶನ್ ಹೊರಬರುತ್ತಿದ್ದಂತೆ ನೂಕಾಟ, ತಳ್ಳಾಟ ಸಂಭವಿಸಿ ಮನೆಯೊಂದರ ಗೋಡೆ ಕುಸಿದು ಬಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ಮಾಡಬೇಕಾಯಿತು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯಿಂದ ಹೊರಬಂದ ನಟ ದರ್ಶನ್ ಅಭಿಮಾನಿಗಳತ್ತ ಕೈಬೀಸಿ ಇನ್ನು ಮುಂದೆ ಯಾವತ್ತೂ ಹೀಗೆ ನಡೆದುಕೊಳ್ಳುವುದಿಲ್ಲ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಹೇಳಿ ಚಾಮುಂಡೇಶ್ವರಿ ದರ್ಶನಕ್ಕೆ ಮೈಸೂರಿಗೆ ತೆರಳಿದರು. (ಒನ್‌ಇಂಡಿಯಾ ಕನ್ನಡ)
More from Filmibeat
English summary
Kannada actor Darshan fans collapsed compound wall at Rajarajeshwari Nagar on Saturday, who were eagerly waiting to get their hero his bail granted in court for a month.


Click it and Unblock the Notifications











