ತಾಯಿಯೊಂದಿಗೆ ಚಾಮುಂಡೇಶ್ವರಿ ದರ್ಶನಕ್ಕೆ ದರ್ಶನ್!

ನಿನ್ನೆ ಬಿಡುಗಡೆಯ ತಕ್ಷಣವೇ ಚಾಮುಂಡಿ ಬೆಟ್ಟ ಹಾಗೂ ಧರ್ಮಸ್ಥಳಕ್ಕೆ ಹೋಗುವುದಾಗಿ ಅವರು ಸಂಕಲ್ಪ ಮಾಡಿದ್ದರಂತೆ. ಈ ವಿಷಯವನ್ನು ದರ್ಶನ್ ಸಹೋದರ ದಿನಕರ್ ಸ್ವತಃ ಮಾಧ್ಯಮಗಳಿಗೆ ತಿಳಿಸಿದ್ದರು. ಅದರಂತೆ ಇಂದು ದರ್ಶನ್ ತಾಯಿಯೊಂದಿಗೆ ದೇವಿ ಚಾಮುಂಡಿ ದರ್ಶನಕ್ಕೆ ತೆರಳಿದ್ದಾರೆ. ಅಲ್ಲಿ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ.
ದರ್ಶನ್ ದಂಪತಿಗೆ ದರ್ಶನ್ ತಾಯಿ ಮೀನಾರೊಂದಿಗೆ ಈ ಮೊದಲು ಅಷ್ಟೇನೂ ಒಳ್ಳೆಯ ಸಂಬಂಧ ಇರಲಿಲ್ಲ ಎನ್ನುವ ಸುದ್ದಿ ಇತ್ತು. ಇದೀಗ ದರ್ಶನ್, ತಾಯಿಯೊಂದಿಗೆ ಚಾಮುಂಡಿಬೆಟ್ಟಕ್ಕೆ ಹೋಗುತ್ತಿರುವುದು ಅವರ ಕುಟುಂಬದ ಆಪ್ತವಲಯಕ್ಕೆ ಸಂತೋಷವನ್ನು ಉಂಟುಮಾಡಿದೆ.
ಅಷ್ಟೇ ಅಲ್ಲ, ಇಡೀ ಕುಟುಂಬ ಈ ಘಟನೆಯ ನಂತರ ಒಂದಾಗಿರುವುದು ಕುಟುಂಬದ ಆಪ್ತರಿಗಲ್ಲದೇ ಅವರ ಅಭಿಮಾನಿಗಳಿಗೂ, ಚಿತ್ರರಂಗದವರಿಗೂ ಹಾಗೂ ಕರ್ನಾಟಕದ ಎಲ್ಲ ಜನರಿಗೂ ಸಂತೋಷದ ಸಂಗತಿಯೇ ಸರಿ.
More from Filmibeat
English summary
Challenging Star Darshan is going towards Mysore to visit Chamundibetta. He is going to perform Pooja to Devi Chamundeshari. Important news that he is accompanied with his mother Meena. All are happy with this developement.


Click it and Unblock the Notifications











