ಭಾವುಕರಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ದರ್ಶನ್

ಹೀಗೆ ಹೇಳಿ ಅಭಿಮಾನಿಗಳ ಕಡೆ ಕೈ ಎತ್ತಿ ಕ್ಷಮೆ ಯಾಚಿಸಿದ ನಟ ದರ್ಶನ್ ಭಾವುಕರಾದರು. ಈ ವೇಳೆ ಸೇರಿದ್ದ ಅಭಿಮಾನಿಗಳು ದರ್ಶನ್ ಅವರಿಗೆ ಹೂವಿನ ಹಾರ, ಹೂವು ಹಾಗೂ ಕೇಕ್ ಗಳನ್ನು ನೀಡಿದರು. ಬೇಸರಿಸಿಕೊಳ್ಳದೇ ಅಭಿಮಾನಿಗಳನ್ನು ಚೆನ್ನಾಗಿ ನೋಡಿಕೊಂಡ ದರ್ಶನ್ ಎಲ್ಲ ಅಭಿಮಾನಿಗಳನ್ನೂ ಮುಟ್ಟಿ ಮುಟ್ಟಿ ಮಾತನಾಡಿಸುತ್ತಿದ್ದುದು ಕಂಡು ಬರುತ್ತಿತ್ತು. ಅಭಿಮಾನಿಗಳೂ ಅಷ್ಟೇ ದರ್ಶನರನ್ನು ನೋಡಿ ಭಾವುಕರಾಗಿ ದರ್ಶನ್ ಸುತ್ತುವರಿದು ಹಸ್ತಲಾಘವ ಮಾಡಿದರು.
ಅಭಿಮಾನಿಗಳು ದರ್ಶನ್ ನೋಡಲು ಮನೆಯ ಕಂಪೌಂಡ್, ಮರಗಳ ಮೇಲೆಲ್ಲಾ ಹತ್ತಿ ಕೊನೆಗೂ ದರ್ಶನ ಪಡೆದ ಸಂತೋಷದಲ್ಲಿ ತೇಲಾಡುತ್ತಿದ್ದರು. ಇದೇ ವೇಳೇ ಅಲ್ಲಿ ಕಿರುತೆರೆ ಹಾಗೂ ಚಿತ್ರರಂಗದ ಹಲವಾರು ಪ್ರಮುಖರು ದರ್ಶನ್ ರನ್ನು ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದರು. ಅವಿನಾಶ್-ಮಾಳವಿಕಾ ದಂಪತಿ, ಬುಲೆಟ್ ಪ್ರಕಾಶ್ ಹಾಗೂ ಇನ್ನಿತರರು ಭೇಟಿಯಾದ ಪ್ರಮುಖರು.
ಈ ವೇಳೆ ಸೇರಿದ್ದ ಅಭಿಮಾನಿಗಳ ನೂಕು-ನುಗ್ಗಲಿನಿಂದಾಗಿ ದರ್ಶನ್ ಮೆನೆಯ ಕಂಪೌಂಡ್ ಕುಸಿದು ಮೂವರಿಗೆ ಗಾಯಗಳಾಗಿವೆ. ಕಂಪೌಂಡ್ ಕುಸಿದಿದ್ದಕ್ಕೆ ಬೇಸರಿಸಿಕೊಳ್ಳದ ದರ್ಶನ್ ಗಾಯಗೊಂಡವರಿಗೆ ಸಾಂತ್ವನ ಹೇಳಲು ಮರೆಯಲಿಲ್ಲ.


Click it and Unblock the Notifications











