twitter
    For Quick Alerts
    ALLOW NOTIFICATIONS  
    For Daily Alerts

    ರಮ್ಯಾ ರಾಜಕೀಯ ಎಂಟ್ರಿ ಹಿಂದಿನ 'ಕೈ' ಯಾವುದು?

    By Rajendra
    |

    ನಟಿ ರಮ್ಯಾ ರಾಜ್ಯ ಯುವ ಕಾಂಗ್ರೆಸ್‌ಗೆ ಸ್ಪರ್ಧಿಸಿ ಗೆದ್ದಿದಾಯಿತು. ಆದರೆ ರಮ್ಯಾ ಅವರು ತಮ್ಮ ಸ್ವಂತ ನಿರ್ಣಯದ ಮೇರೆಗೆ ರಾಜಕೀಯ ಕ್ಷೇತ್ರಕ್ಕೆ ಧುಮಿಕಿದರೋ ಅಥವಾ ಅವರ ರಾಜಕೀಯ ರಂಗಪ್ರವೇಶದ ಹಿಂದೆ ಯಾರದಾದರೂ ಕೈವಾಡವಿದೆಯೇ?

    ಇಷ್ಟು ದಿನ ಮೌನವಾಗಿದ್ದ ಶಾಸಕ ಡಿ ಕೆ ಶಿವಕುಮಾರ್ ಕೊನೆಗೂ ಬಾಯ್ಬಿಟ್ಟಿದ್ದಾರೆ. ರಮ್ಯಾರನ್ನು ಚುನಾವಣೆಗೆ ನಿಲ್ಲುವಂತೆ ಮಾಡಿದ್ದು ನಾನೇ ಎಂದಿದ್ದಾರೆ. ಈ ಬಗ್ಗೆ ಸಂಸದ ಎಚ್ ವಿಶ್ವನಾಥ್ ಕಾಂಗ್ರೆಸ್‌ನಲ್ಲಿ ಸಖಿಯರ ಪರ್ವ ಆರಂಭವಾಗಿದೆ ಎಂದು ಲೇವಡಿ ಮಾಡಿದ್ದರು.

    ಭಾರಿ ವಿವಾದಕ್ಕೆ ಕಾರಣವಾಗಿದ್ದ ಈ ಹೇಳಿಕೆಗೆ ಈಗ ಡಿಕೆಶಿ ತಿರುಗೇಟು ನೀಡಿದ್ದು, ರಮ್ಯಾರನ್ನು ಯುವ ಕಾಂಗ್ರೆಸ್‌ ಕಣಕ್ಕೆ ಇಳಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ರಮ್ಯಾ ಅವರು ರಾಹುಲ್ ಗಾಂಧಿ ಅವರಿಂದ ಪ್ರಭಾವಿತರಾಗಿ ಯುವ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

    ನಿಮ್ಮಂತಹ ಯುವತಿಯರು ಕಾಂಗ್ರೆಸ್‌ಗೆ ಸೇರಿದರೆ ಶಕ್ತಿ ತುಂಬಿದಂತಾಗುತ್ತದೆ ಎಂದು ಹೇಳಿ ಪ್ರೇರೇಪಿಸಿದ್ದೆ. ಇದರಲ್ಲಿ ನನ್ನ ಅಥವಾ ರಮ್ಯಾ ಅವರ ಸ್ವಾರ್ಥವಿರಲಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಾಳೆಯದಲ್ಲೇ ಈ ಬಗ್ಗೆ ಅಪಸ್ವರಗಳು ಮಿಡಿದಿದ್ದವು. ರಮ್ಯಾರನ್ನು ಡಿಕೆಶಿ ಅವರೇ ಕಣಕ್ಕಿಳಿಸಿದ್ದು ಎಂದು ಗೊತ್ತಾದ ಕೂಡಲೆ ಹಲವಾರು ಟೀಕೆಗಳು ಕೇಳಿಬಂದಿದ್ದವು.

    ಈ ಎಲ್ಲಾ ಟೀಕೆಗಳಿಗೆ ತಿರುಗೇಟು ನೀಡಿರುವ ಡಿಕೆಶಿ, ಆದಷ್ಟು ಯುವಕ ಯುವತಿಯರನ್ನು ಯುವ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಲು ಸ್ವತಃ ರಾಹುಲ್ ಗಾಂಧಿ ಮನವಿ ಮಾಡಿಕೊಂಡಿದ್ದರು. ಆದರೆ ಜವಾಬ್ದಾರಿಯನ್ನು ಯಾರೊಬ್ಬರೂ ಹೊರಲು ಸಿದ್ಧರಿರಲಿಲ್ಲ. ತಾವು ಆ ಸಾಹಸ ಮಾಡಿದ್ದಕ್ಕೆ ಇವರು ಈಗ ರಾಗ ಎಳೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)

    English summary
    Former minister and present MLA DK Shivakumar breaks silence on Actress Ramya political entry. He agrees that, he has a hand in Ramya's political entry.
    Tuesday, November 8, 2011, 17:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X