ಹೊಸ ದುನಿಯಾಗೆ ಅಡಿಯಿಟ್ಟ ದುನಿಯಾ ಸೂರಿ

By Rajendra

ಚಿತ್ರ ನಿರ್ದೇಶಕ ದುನಿಯಾ ಸೂರಿ ಅವರ ಮದುವೆ ಬುಧವಾರ (ಡಿ.8) ಬೆಳಗ್ಗೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನೆರವೇರಿತು. ತನ್ನ ಬಹುಕಾಲದ ಗೆಳತಿ ಪಲ್ಲವಿ ಅವರನ್ನು ಬಾಳಸಂಗಾತಿಯಾಗಿ ಸೂರಿ ಇಂದು ಬರಮಾಡಿಕೊಂಡರು. ನೆಂಟರು, ಆಪ್ತರಿಷ್ಟರ ಸನ್ನಿಧಿಯಲ್ಲಿ ಮದುವೆ ಸಮಾರಂಭ ಸರಳವಾಗಿ ನಡೆಯಿತು.

ಸೂರಿ ಮತ್ತು ಪಲ್ಲವಿ ಅವರ ಕುಟುಂಬಗಳು ಮಂಗಳವಾರವೇ ಕೊಲ್ಲೂರಿಗೆ ತೆರಳಿದ್ದರು. ಬುಧವಾರ ಮುಂಜಾನೆ ಮದುವೆಯ ಧಾರ್ಮಿಕ ವಿಧಿ ವಿಧಾನಗಳ ಬಳಿಕ ಮದುವೆ ನೆರವೇರಿತು. ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಕೆಲವು ಆಪ್ತರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾದರು.

ಸೂರಿ ಮತ್ತು ಪಲ್ಲವಿ ಪರಸ್ಪರ ಒಬ್ಬರೊನ್ನೊಬ್ಬರು ಪ್ರೀತಿಸುತ್ತಿದ್ದರು. ಬಳಿಕ ಹೆತ್ತವರ ಒಪ್ಪಿಗೆ ಪಡೆದು ಕೊಲ್ಲೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸೂರಿ ಮತ್ತು ಪಲ್ಲವಿ ನಡುವಿನ 'ಲವ್' 'ಮ್ಯಾರೇಜ್'ನಲ್ಲಿ ಸುಖಾಂತ್ಯವಾಗಿದೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

More from Filmibeat

English summary
Duniya Soori weds Pallavi on Wednesday, Dec 8th at Kolluru Mookambika temple. Jackie director Soori is arranging a separate reception for his friends in Bangalore. Only few celebrities are attend the marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X