ಸಿಂಗಪೂರ್ ನಲ್ಲಿ ಚಿರಂಜೀವಿ 'ಗಂಡೆದೆ'
ರಾಮು ನಿರ್ಮಿಸುತ್ತಿರುವ ಅದ್ದೂರಿ ಗಂಡೆದೆ ಚಿತ್ರದ ಎರಡು ಗೀತೆಗಳ ಚಿತ್ರೀಕರಣವು ಏಪ್ರಿಲ್ 8 ರಿಂದ ಸಿಂಗಪೂರ್ ಸುತ್ತಮುತ್ತ ನಡೆಯಲಿದೆ. ರಾಮು ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ಚಿತ್ರಕ್ಕೆ ಈಗಾಗಲೇ ಅಬ್ಬಾಯಿ ನಾಯ್ಡು ಸ್ಟುಡಿಯೋವಿನಲ್ಲಿ ಮಾತಿನ ಮರು ಲೇಪನ ಕಾರ್ಯವು ಮುಂದುವರೆದಿದ್ದು, ಮೇ ಮೊದಲ ವಾರದಲ್ಲಿ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ. ಈ ಚಿತ್ರವನ್ನು ಅಕುಲ್ ಶಿವ ನಿರ್ದೇಶಿಸುತ್ತಿದ್ದಾರೆ.
ಚಿತ್ರಕ್ಕೆ ರಾಮ್‌ನಾರಾಯಣ್ ಸಂಭಾಷಣೆ, ಸಾಹಿತ್ಯ, ಚಕ್ರಿ ಸಂಗೀತ, ಮುಜೀರ್ ಛಾಯಾಗ್ರಹಣ, ಮುನಿರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಚ್ಮಾಯಿಲ್ ಕಲೆ, ಉಮೇಶ್ ನಿರ್ಮಾಣ ನಿರ್ವಹಣೆ, ಹರ್ಷ ನೃತ್ಯವಿದೆ. ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ರಾಗಿಣಿ, ದೇವರಾಜ್, ರಮೇಶ್‌ಭಟ್, ರಂಗಾಯಣರಘು, ಸಾಧುಕೋಕಿಲ, ಅರುಣಾ ಬಾಲ್‌ರಾಜ್, ಚಿತ್ರಾಶೆಣೈ, ಲಕ್ಷ್ಮಣ್, ಪವನ್, ಸಂಕೇತ್ ಕಾಶಿ ಮುಂತಾದವರಿದ್ದಾರೆ.
ಚಿರಂಜೀವಿ ಸರ್ಜಾ ರಾಗಿಣಿ ಗಂಡೆದೆ ಸಿಂಗಪೂರ್ ಅಕುಲ್ ಶಿವ chiranjeevi sarja ragini gandedhe akul shiva singapore


Click it and Unblock the Notifications