»   » ಗಣೇಶ್ ಕಾಸರಗೋಡರ ಮೌನ ಮಾತಾದಾಗ

ಗಣೇಶ್ ಕಾಸರಗೋಡರ ಮೌನ ಮಾತಾದಾಗ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿನ ಕಲಾವಿದರು ಮತ್ತು ತಂತ್ರಜ್ಞರ ಕುರಿತಾದ 'ಮೌನ ಮಾತಾದಾಗ' ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಎರಡನೆಯ ಪುಸ್ತಕ ಇದು. ಈ ಹಿಂದೆ ಅವರು ಬರೆದಿದ್ದ 'ಚೆದುರಿದ ಚಿತ್ರಗಳು' ಪುಸ್ತಕ ಸಾಕಷ್ಟು ಜನಪ್ರಿಯವಾಗಿತ್ತು. ಈ ಪುಸ್ತಕವನ್ನು ಸ್ನೇಹ ಪ್ರಕಾಶನ ಹೊರತಂದಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಶುಕ್ರವಾರ(ಡಿ.5) ನಡೆಯಿತು.

''ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಪ್ರತಿವಾರ ಬರುವ ಗಣೇಶ್ ಕಾಸರಗೋಡು ಅವರ 'ಮೌನ ಮಾತಾದಾಗ' ಅಂಕಣವನ್ನು ನಾನು ತಪ್ಪದೆ ಓದುತ್ತೇನೆ. ನನಗೆ ತುಂಬ ಇಷ್ಟವಾದ ಅಂಕಣ. ಲೇಖಕರ ಸಾಮರ್ಥ್ಯ, ದಕ್ಷತೆ ನಿಜಕ್ಕೂ ಮೆಚ್ಚಿವಂತದ್ದ್ದು.ಗಣೇಶ್ ಕಾಸಗೋಡು ಅವರ ಅಭಿಮಾನಿ ನಾನು'' ಎಂದರು ಲಂಕೇಶ್ ಪತ್ರಿಕೆ ಸಂಪಾದಕ ಇಂದ್ರಜಿತ್ ಲಂಕೇಶ್. ಮೌನ ಮಾತಾದಾಗ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಇಂದ್ರಜಿತ್ ಹೀಗೆಂದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಉಪಸ್ಥಿತರಿದ್ದರು. ಅವರು ಮಾತಾನಾಡುತ್ತಾ ಒಂದೆರಡು ನುಡಿಮುತ್ತುಗಳನ್ನು ಉದುರಿಸಿದರು. ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಕೊಂಡು ಓದುವಂತೆ ಸಲಹೆ ನೀಡಿದರು. ನಾವು ಕೊಂಡು ತಂದ ಎಲ್ಲ ಪುಸ್ತಕಗಳನ್ನು ಓದಲು ಸಾಧ್ಯವಾಗುವುದಿಲ್ಲ. ಹಾಗಂತ ಪುಸ್ತಕಗಳನ್ನು ಕೊಂಡುಕೊಳ್ಳುವುದನ್ನು ಮಾತ್ರ ನಿಲ್ಲಿಸಬೇಡಿ. ಅವು ಒಂದಿಲ್ಲೊಂದು ದಿನ ಉಪಯೋಗಕ್ಕೆ ಬರುತ್ತವೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada