ಕನ್ನಡ ಸಿನಿಮಾ ತಾರೆಗಳ ನಿವಾಸದ ಮೇಲೆ ಐಟಿ ದಾಳಿ

By Rajendra

IT Raid on Kannada stars
ಕನ್ನಡ ಕಿರುತೆರೆ ಹಾಗೂ ಚಿತ್ರ ನಿರ್ಮಾಪಕರ ನಿವಾಸ ಹಾಗೂ ಕಚೇರಿಗಳ ಮೇಲೆ ಬೆಂಗಳೂರಿನಲ್ಲಿ ಶುಕ್ರವಾರ (ಜು.8) ಏಕಕಾಲಕ್ಕೆ ಆದಾಯ ತೆರಿಗೆ ದಾಳಿ ನಡೆದಿದೆ. ಆರು ಅಧಿಕಾರಿಗಳ ತಂಡದಿಂದ ಆಸ್ತಿಪಾಸ್ತಿ ಪರಿಶೀಲನೆ ನಡೆಯುತ್ತಿದೆ.

ಕಿರುತೆರೆ ನಟ, ನಿರ್ಮಾಪಕ ರವಿಕಿರಣ್ ಅವರ ಟೀಚರ್ಸ್ ಕಾಲೋನಿ ನಿವಾಸ, ನಿರ್ಮಾಪಕ ಕೆ ಮಂಜು ಅವರ ಜಯನಗರ ನಿವಾಸ ಹಾಗೂ ನಟ ಸಿಹಿಕಹಿ ಚಂದ್ರು ಜೆಪಿ ನಗರ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

ಇದೇ ಮೊದಲ ಬಾರಿಗೆ ಐಟಿ ಅಧಿಕಾರಿಗಳ ಕಣ್ಣು ಕನ್ನಡ ಕಿರುತೆರೆ ಕಲಾವಿದರು ಹಾಗೂ ನಿರ್ಮಾಪಕರ ಮೇಲೆ ಬಿದ್ದಿರುವುದು ವಿಶೇಷ.ಮೊನ್ನೆಯಷ್ಟೆ ಕೋ-ಆಪರೇಟೀವ್ ಸೊಸೈಟಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ ಕಿರುತೆರೆ ಕಲಾವಿದರು ನಿರ್ಮಾಪಕರ ಮೇಲೆ ಐಟಿ ಕಣ್ಣು ಬಿದ್ದಿದೆ.

ಬೆಳಗ್ಗೆ ಸುಮಾರು 8 ಗಂಟೆಯಿಂದ ದಾಳಿ ನಡೆದಿದೆ. ಬದುಕು, ಬೆಳಕು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ರವಿಕಿರಣ್ ನಟಿಸಿದ್ದಾರೆ. ಟೀಚರ್ಸ್ ಕಾಲೋನಿಯ ರವಿಕಿರಣ್ ಅವರ ಮೂರು ಮನೆಗಳ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada small screen actor cum producer Ravikiran, Sihi Kahi Chandru and film producer K Manju residence at Bangalore have been raided by the Income Tax officials on Friday (July 8) morning. It is said that the IT sleuths found some irregularities in their advance tax assessment of these actors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X