ಮೈಸೂರು ಜೂನಲ್ಲಿ ಮಗಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್

ಮಂಗಳವಾರ ಮೃಗಾಲಯಕ್ಕೆ ಹಾಲಿಡೇ. ವಾರಕ್ಕೊಮ್ಮೆ ಪ್ರಾಣಿಗಳ ಈ ಆಲಯದ ನಿರ್ವಹಣೆಗೋಸ್ಕರ ಈ ವಾರದ ರಜೆ ಪದ್ಧತಿ ಜಾರಿಯಲ್ಲಿದೆ. ನೂರಾರು ಸಂಖ್ಯೆಯಲ್ಲಿರುವ ಪ್ರಾಣಿ, ಪಕ್ಷಿಗಳನ್ನು ಇಲ್ಲಿ ವೀಕ್ಷಿಸುವುದೇ ಒಂದು ಚೆಂದ. ಒಂದಕ್ಕಿಂತ ಒಂದು ವಂಡರ್ಫುಲ್. ಇಂಥ ವಂಡರ್ ವೀಕ್ಷಣೆಗೆ ಗಣೇಶ್ ತಮ್ಮ ಎರಡೂವರೆ ವರ್ಷದ ಮಗಳ ಜತೆ ಆಗಮಿಸಿದ್ದರು. ಈ ವೇಳೆ ಗಣೇಶ್ ಮಡದಿ ಶಿಲ್ಪಾ ಸಹ ಜತೆಗಿದ್ದರು.
ಹಲವಾರು ಬಾರಿ ಶೂಟಿಂಗಿಗಾಗಿ ಮೈಸೂರಿಗೆ ಗಣೇಶ್ ಭೇಟಿ ನೀಡಿದ್ದುಂಟು. ಆದರೆ ಮಗಳಿಗೆ ಮೃಗಾಲಯ ತೋರಿಸುವ ಸಲುವಾಗಿ ಕುಟುಂಬ ಸಮೇತ ಆಗಮಿಸಿದ್ದು ವಿಶೇಷ. ಇಂದು ಸಂಜೆ ನಾಲ್ಕು ಗಂಟೆಗೆ ಆಗಮಿಸಿದ ಗಣೇಶ್, ಮೃಗಾಲಯದಲ್ಲಿ ಪ್ರಾಣಿಗಳನ್ನು ವೀಕ್ಷಿಸಲು ಸುಮಾರು ಸಮಯ ಕಳೆದರು. ಮೃಗಾಲಯದಲ್ಲಿನ ಬ್ಯಾಟರಿ ಚಾಲಿತ ವಾಹನದ ಮೂಲಕ ಇಡೀ ಝೂ ರೌಂಡ್ ಹಾಕಿದ ಗಣಿ, ಹರ್ಷೋಲ್ಲಾಸದ ಉತ್ತುಂಗದಲ್ಲಿದ್ದರು.
More from Filmibeat
English summary
Golden Star Ganesh along with his two-and-a-half-year daughter had visited Mysore Zoo recently (July 5). Ganesh wife Shilpa also accompanied them.


Click it and Unblock the Notifications











