twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ಜೂನಲ್ಲಿ ಮಗಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್

    By Srinath
    |

    Golden Star Ganesh along with his wife in Mysore zoo
    ಗೋಲ್ಡನ್ ಸ್ಟಾರ್ ಗಣೇಶ್ ಅವರು ಇತ್ತೀಚೆಗೆ (ಜುಲೈ 5) ಮೈಸೂರು ಮೃಗಾಲಯಕ್ಕೆ ಜೂನಿಯರ್ ಗಣೇಶ್, ಪತ್ನಿ ಶಿಲ್ಪಾ ಹಾಗೂ ಕುಟುಂಬದ ಸದಸ್ಯರ ಜತೆ ಭೇಟಿ ನೀಡಿ ಫುಲ್ ರಿಲ್ಯಾಕ್ಸ್ ಆದರು. ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಕುಟುಂಬದ ಜತೆ ಮೃಗಾಲಯದಲ್ಲಿ ಕಳೆಯುವ ಮೂಲಕ ಗಣೇಶ್ ಸಖತ್ ಖುಷಿಯಲ್ಲಿದ್ದರು.

    ಮಂಗಳವಾರ ಮೃಗಾಲಯಕ್ಕೆ ಹಾಲಿಡೇ. ವಾರಕ್ಕೊಮ್ಮೆ ಪ್ರಾಣಿಗಳ ಈ ಆಲಯದ ನಿರ್ವಹಣೆಗೋಸ್ಕರ ಈ ವಾರದ ರಜೆ ಪದ್ಧತಿ ಜಾರಿಯಲ್ಲಿದೆ. ನೂರಾರು ಸಂಖ್ಯೆಯಲ್ಲಿರುವ ಪ್ರಾಣಿ, ಪಕ್ಷಿಗಳನ್ನು ಇಲ್ಲಿ ವೀಕ್ಷಿಸುವುದೇ ಒಂದು ಚೆಂದ. ಒಂದಕ್ಕಿಂತ ಒಂದು ವಂಡರ್ಫುಲ್. ಇಂಥ ವಂಡರ್ ವೀಕ್ಷಣೆಗೆ ಗಣೇಶ್ ತಮ್ಮ ಎರಡೂವರೆ ವರ್ಷದ ಮಗಳ ಜತೆ ಆಗಮಿಸಿದ್ದರು. ಈ ವೇಳೆ ಗಣೇಶ್ ಮಡದಿ ಶಿಲ್ಪಾ ಸಹ ಜತೆಗಿದ್ದರು.

    ಹಲವಾರು ಬಾರಿ ಶೂಟಿಂಗಿಗಾಗಿ ಮೈಸೂರಿಗೆ ಗಣೇಶ್ ಭೇಟಿ ನೀಡಿದ್ದುಂಟು. ಆದರೆ ಮಗಳಿಗೆ ಮೃಗಾಲಯ ತೋರಿಸುವ ಸಲುವಾಗಿ ಕುಟುಂಬ ಸಮೇತ ಆಗಮಿಸಿದ್ದು ವಿಶೇಷ. ಇಂದು ಸಂಜೆ ನಾಲ್ಕು ಗಂಟೆಗೆ ಆಗಮಿಸಿದ ಗಣೇಶ್, ಮೃಗಾಲಯದಲ್ಲಿ ಪ್ರಾಣಿಗಳನ್ನು ವೀಕ್ಷಿಸಲು ಸುಮಾರು ಸಮಯ ಕಳೆದರು. ಮೃಗಾಲಯದಲ್ಲಿನ ಬ್ಯಾಟರಿ ಚಾಲಿತ ವಾಹನದ ಮೂಲಕ ಇಡೀ ಝೂ ರೌಂಡ್ ಹಾಕಿದ ಗಣಿ, ಹರ್ಷೋಲ್ಲಾಸದ ಉತ್ತುಂಗದಲ್ಲಿದ್ದರು.

    English summary
    Golden Star Ganesh along with his two-and-a-half-year daughter had visited Mysore Zoo recently (July 5). Ganesh wife Shilpa also accompanied them.
    Friday, July 8, 2011, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X