ಒನ್‌ಇಂಡಿಯಾ ಕನ್ನಡಕ್ಕೆ ಸುದೀಪ್ ನೀಡಿದ ಸಂದರ್ಶನ

By *ಪೂರ್ಣ ವಿ-ರಾಮ

ಸುದೀಪ್ ಸಂತೋಷ್ ಚಿತ್ರಮಂದಿರಕ್ಕೆ ಬಂದಿದ್ದರು. ಪ್ರೊಜೆಕ್ಷನ್ ಥಿಯೇಟರ್‌ನಲ್ಲಿ ಕೂತಿದ್ದರು. ಜೊತೆಗೆ ಪತ್ನಿ ಪ್ರಿಯಾ ಕೂಡ ಇದ್ದರು. ಇಬ್ಬರ ಮುಖದಲ್ಲೂ ಸಂತಸದ ಅಲೆ ಮೂಡಿತ್ತು. ಅಭಿಮಾನಿಗಳ ಅದ್ಧೂರಿ ಪ್ರೀತಿ ನೋಡಿ ದಂಗಾದರು. ವಿಷ್ಣುವರ್ಧನ್‌ಗೆ ಹ್ಯಾಟ್ಸ್ ಆಫ್ ಎಂದರು. ಇದೇ ಸಂದರ್ಭದಲ್ಲಿ ನಮ್ಮ ಪ್ರತಿನಿಧಿಯ ಜೊತೆ ಐದೇ ಐದು ನಿಮಿಷ ಮಾತನಾಡಿದರು...

ವಿಷ್ಣುವರ್ಧನ ಪ್ರತಿಕ್ರಿಯೆ ಹೇಗಿದೆ?
ನಾನೇನ್ ಹೇಳೋದು? ನೀವೇ ನೋಡ್ತಾ ಇದೀರಲ್ಲಾ? ನಂಗೆ ಒಳಗೆ ಬರೋಕ್ ಬಿಡಲಿಲ್ಲ ನನ್ನ ಅಭಿಮಾನಿಗಳು. ಅಲ್ಲಲ್ಲ, ವಿಷ್ಣು ಸರ್ ಅಭಿಮಾನಿಗಳು!

ಇದು ನಿಜಕ್ಕೂ ನಿಮ್ಮ ಗೆಲುವು ಅಂತೀರಾ?
ಖಂಡಿತ ಇಲ್ಲ. ಇದು ನನ್ನ ಗೆಲುವು ಖಂಡಿತ ಅಲ್ಲ. ಇದೇನಿದ್ದರೂ ವಿಷ್ಣುವರ್ಧನ್ ಅವರ ಗೆಲುವು. ಅವರಿಂದ ನಮ್ಮ ಚಿತ್ರಕ್ಕೆ ಸಿಕ್ಕ ಸಂಭ್ರಮದ ಗೆಲುವು!
ಇನ್ನೊಂದ್ ಮಾತು. ಈ ಪಟಾಕಿ, ಈ ಕ್ರೌಡು ಎಲ್ಲವೂ ನನ್ನ ಕಡೆಯಿಂದ ಆದ ಅರೇಂಜ್ ಮೆಂಟ್ ಅಲ್ಲ. ನನ್ನ ಫ್ಯಾಮಿಲಿ ಮುಟ್ಟಿ ಹೇಳ್ತೀನಿ, (ಪಕ್ಕದಲ್ಲಿ ನಿಂತಿದ್ದ ಪ್ರಿಯಾ ಅವರ ಕೈ ಹಿಡಿದು) ಇದರಲ್ಲಿ ನನ್ನ ಕೈವಾಡ ಏನೂ ಇಲ್ಲ. ಎಲ್ಲವೂ ಅವರೇ (ಅಭಿಮಾನಿಗಳು) ಡಿಸೈಡ್ ಮಾಡಿರೋದು!

ಚಿತ್ರದ ಬಗ್ಗೆ ಕಳೆದೆರಡು ದಿನಗಳಿಂದ ಆದ ಅಪಪ್ರಚಾರದ ಬಗ್ಗೆ ಏನ್ ಹೇಳ್ತೀರಿ?
ಏನೂ ಅನ್ನೋದಕ್ಕೆ ಉತ್ತರ ಈಗಾಗ್ಲೇ ಸಿಕ್ಕಿಯಾಗಿದೆ. ವಿಷ್ಣು ಸರ್ ಬಗ್ಗೆ ಒಂದೇ ಒಂದ್ ಅಕ್ಷರ ಕೆಟ್ಟದಾಗಿದ್ದಿದ್ರೂ ಖಂಡಿತ ಅವರ ಅಭಿಮಾನಿಗಳು ನಮ್ಮನ್ನ ಸುಮ್ನೆ ಬಿಡ್ತಾ ಇರಲಿಲ್ಲ!

ಬೇರೆ ಜಿಲ್ಲೆಗಳಲ್ಲಿ ರೆನ್ಪಾನ್ಸ್ ಹೇಗಿದೆ?
ಮೈಸೂರಲ್ಲಿ ಮೂವತ್ತೇಳು ಥೀಯೇಟರ್ ಹಾಕಿದೀವಿ. ಅದು ವಿಷ್ಣು ಸರ್ ತವರೂರು. ಮಾರ್ನಿಂಗ್ ಶೋ ಹೌಸ್ ಫುಲ್ಲು. ಎಲ್ಲಾ ಕಡೆ ಟಿಕೆಟ್ಸ್ ಸೋಲ್ಡ್‌ಔಟ್. ಹುಬ್ಬಳ್ಳಿ-ದಾವಣಗೆರೆ-ಶಿವಮೊಗ್ಗ ಎಲ್ಲಾ ಕಡೆ ಅಭಿಮಾನಿಗಳು ಮೆರವಣಿಗೆ ಮಾಡ್ತಾ ಇದಾರೆ ಅಂತ ಕೇಳಿಪಟ್ಟೆ. ಸೋ.. ಎಲ್ಲಾ ವಿಷ್ಣುವರ್ಧನನ ಲೀಲೆ!

ಕೊನೆಯದಾಗಿ ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ವಿಚಾರದ ಬಗ್ಗೆ ಕೇಳಿದರೆ ಬೇಸರ ಆಗುತ್ತಾ?
ಖಂಡಿತ ಇಲ್ಲ. ನಾನೂ ಒಬ್ಬ ಮನುಷ್ಯ. ಸಣ್ಣ ಪುಟ್ಟ ತಪ್ಪ್ ಮಾಡಿರ್ತಿನೇನೋ. ಬಟ್ ಬೇಕು ಅಂತ ಯಾರನ್ನೂ ಹರ್ಟ್ ಮಾಡೋ ಮನಸ್ಸು ನಂದಲ್ಲ. ನನ್ ಬಗ್ಗೆ ಒಂದು ಪತ್ರಿಕೆಯಲ್ಲಿ ಬರೆದಿರುವ ಆರ್ಟಿಕಲ್ ನೋಡಿದೆ. ಏನೂ ರಿಯಾಕ್ಟ್ ಮಾಡ್ಬೇಕು ಅನ್ನಿಸಲಿಲ್ಲ. ಬಿಕಾಸ್ ಆ ಪತ್ರಿಕೆ ಮುಖ್ಯಸ್ಥರು ಒಂದು ಕಾಲದಲ್ಲಿ ನಾನು ತುಂಬಾ ತೊಂದರೇಲಿ ಸಿಕ್ಕಿ ಹಾಕಿಕೊಂಡಿದ್ದಾಗ ತುಂಬಾ ಹೆಲ್ಪ್ ಮಾಡಿದ್ರು. ಅವ್ರು ನನ್ ಬಗ್ಗೆ ಬರೆದಿರೋದ್ರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ನಾನ್ ಅವರಿಗೆ ನನ್ನ ಹೃದಯದಲ್ಲಿ ದೊಡ್ಡ ಸ್ಥಾನ ಕೊಟ್ಟಿದೀನಿ!

More from Filmibeat

English summary
Read Kannada films actor, director, producer and singer Sudeep exclusive interview. In an hurry bury interview to Oneindia Kannada he talked frankly about her aspirations in the film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X