ಪ್ರಾಣಾಪಾಯದಿಂದ ಕನ್ನಡ ತಾರೆ ಮಾಲಾಶ್ರೀ ಪಾರು
ಕನ್ನಡ ಜನಪ್ರಿಯ ಸಿನಿಮಾ ತಾರೆ ಮಾಲಾಶ್ರೀ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾ ಜಲಪಾತದ ಬಳಿ ನಡೆದಿದೆ. ಶಿಂಷಾ ಜಲಪಾತದ ಬಳಿ ಮಾಲಾಶ್ರೀ ಮುಖ್ಯಭೂಮಿಕೆಯಲ್ಲಿರುವ ಶಕ್ತಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಈ ಸಂದರ್ಭದಲ್ಲಿ ಭಾನುವಾರ ಇದ್ದಕ್ಕಿದ್ದಂತೆ ನೀರಿನ ಹರಿವು ಹೆಚ್ಚಾದ ಕಾರಣ ಚಿತ್ರತಂಡ ಅಪಾಯಕ್ಕೆ ಸಿಲುಕಿತು. ಬಳಿದ ಎಚ್ಚೆತ್ತುಕೊಂಡು ಸ್ಥಳೀಯ ಸಹಾಯದಿಂದ ಪಾರಾಗಿದ್ದಾರೆ. ಈ ಸಂದರ್ಭದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಳೆದ ಕೆಲದಿನಗಳಿಂದ ಇಲ್ಲಿ ಚಿತ್ರೀಕರಣ ನಡೆಯುತ್ತಿತ್ತು.
ಮೈಸೂರು ಬಳಿಕ ಕೆಆರ್‌ಎಸ್ ಜಲಾಶಯದಿಂದ ನೀರು ಹೊರಬಿಡಲಾಗಿತ್ತು. ಈ ವಿಷಯ ಚಿತ್ರತಂಡಕ್ಕೆ ಗೊತ್ತಿಲ್ಲದೆ ಅವರು ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದರು. ಬದುಕಿ ಬಂದದ್ದೆ ಒಂದು ಪವಾಡ ಎಂದು ಮಾಲಾಶ್ರೀ ಹಾಗೂ ಚಿತ್ರದ ನಿರ್ದೇಶಕ ಅನಿಲ್ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
Kannada actress Malashri narrowly escapes from death at Shimsha falls while shooting for her latest flick Shakti. This incident took place on Sunday (7th August) noon. The cast and crew of Shakti suffered from small wounds.


Click it and Unblock the Notifications











