ರಿಯಲ್ ಟ್ರುಥ್ ಎಂಬ ಅಡಿಬರಹದ ಚಿತ್ರ ಅರ್ಧಸತ್ಯ!

ಸತ್ಯಜಿತ್ ಮತ್ತು ಬ್ಯಾಂಕ್ ಜನಾರ್ಧನ್ ವಿಶೇಷ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ನಿರ್ದೇಶನ ಮಾಡಲಿರುವ ಶಶಿ ವರ್ಮ, ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡೇ ಚಿತ್ರೀಕರಣಕ್ಕೆ ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರ ಕನ್ನಡ-ತಮಿಳು-ತೆಲುಗು ಹೀಗೆ ಮೂರು ಭಾಷೆಗಳಲ್ಲಿ ತಯಾರಾಗಲಿರುವುದು ನಿಜವಾದ ವಿಶೇಷ.
ಬಿ.ಎಸ್ ವಿನೋದ್ ಕುಮಾರ್, ಗಿರೀಶ್ ಆಚಾರ್, ವಿರೇಶ್, ಸಿ.ಪಿ.ನಾಗೇಂದ್ರ ಹೀಗೆ ನಾಲ್ವರು ನಿರ್ಮಾಪಕರುಗಳು. ಭೋಲೆ ಸಂಗೀತ, ಜಗದೀಶ್ ಛಾಯಾಗ್ರಹಣ, ಸ್ಟಂಟ್ ಸ್ಟಾಲಿನ್ ಸಾಹಸ, ಆನಂದ್ ಸಂಕಲನ ಇರುವ ಈ ಚಿತ್ರಕ್ಕೆ ಕಮಲ್ ಸಂಭಾಷಣೆ ಬರೆದಿದ್ದಾರೆ. ಆಡಿಯೋ ಬಿಡುಗಡೆ ಅಥವಾ ಚಿತ್ರ ಬಿಡುಗಡೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸದ್ಯಕ್ಕೆ ಇಲ್ಲ.
ಪತ್ರಿಕಾ ಪ್ರಕಟಣೆಯ ಜಾಹೀರಾತನ್ನು ಗಮನಿಸಿದರೆ ಇದು ಆಕ್ಷನ್ ಬೇಸ್ಡ್ ಸಿನಿಮಾ ಎಂಬುದು ಪಕ್ಕಾ. ಚಿತ್ರತಂಡ ಸದ್ಯಕ್ಕೆ ಯಾವ ರೀತಿ ಸಿನಿಮಾ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಕನ್ನಡದ 'ಅರ್ಧ ಸತ್ಯ' ಹಿಂದಿಯ ರೀಮೇಕ್ ಅಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ. ಚಿತ್ರೀಕರಣ ಹಂತದಲ್ಲಿರುವ ಈ ಚಿತ್ರಕ್ಕೆ 'ಆಲ್ ದಿ ಬೆಸ್ಟ್'...! (ಒನ್ ಇಂಡಿಯಾ ವಾರ್ತೆ)


Click it and Unblock the Notifications











