»   » ನಂದ ಚಿತ್ರದಲ್ಲಿ ಶಿವರಾಜ್ ಕುಮಾರ್, ಸಂಧ್ಯಾ ನರ್ತನ

ನಂದ ಚಿತ್ರದಲ್ಲಿ ಶಿವರಾಜ್ ಕುಮಾರ್, ಸಂಧ್ಯಾ ನರ್ತನ

Posted By:
Subscribe to Filmibeat Kannada

ಕೆ.ಕೆ.ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನಂದ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಗೆಳೆಯರಿಬ್ಬರ ಜೀವನದಲ್ಲಿ ಜರುಗಿರುವ ಘಟನೆಯೊಂದರ ಕಥಾಹಂದರವುಳ್ಳ ಈ ಚಿತ್ರಕ್ಕೆ ನಿರ್ಮಾಪಕ ಮಾಹಿನ್ ಅವರೇ ಕಥೆ ಬರೆದಿದ್ದಾರೆ. ಮಾತಿನಭಾಗದ ಚಿತ್ರೀಕರಣ ಮುಗಿಸುತ್ತಾ ಬಂದಿರುವ ನಂದನಿಗೆ ಈಗ ಹಾಡಿನ ಚಿತ್ರೀಕರಣದ ಸಮಯ.

ಚಿತ್ರದ ಸಂಗೀತ ನಿರ್ದೇಶಕರಾಗಿರುವ ವಿ.ಮನೋಹರ್ ರಚಿಸಿರುವ ' ಚಿಂಗಾರಿ ಚಿಂಗಾರಿ ಚಿನಕುರಳಿ ಚಿಂಗಾರಿ ....ಕಣ್ಣಲೇ ಕೊಲ್ಲುವ ಕಠಾರಿ' ಎಂಬ ಗೀತೆಯನ್ನು ನಗರದ ಬಿ ಜಿ ಎಸ್ ಕಾಲೇಜಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇಮ್ರಾನ್ ನೃತ್ಯ ಸಂಯೋಜಿಸಿದ್ದ ಈ ಹಾಡಿನ ಚಿತ್ರೀಕರಣದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್ ಹಾಗೂ ಸಹ ನೃತ್ಯಗಾರರು ಭಾಗವಹಿಸಿದ್ದರು.

ಮುಕ್ಕಾಲು ಭಾಗದ ಚಿತ್ರೀಕರಣ ಮುಗಿದಿರುವ ಚಿತ್ರಕ್ಕೆ ನಿರ್ದೇಶಕ ಅನಂತರಾಜು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಎಸ್.ಮನೋಹರ್ ಸಂಕಲನ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ರಾಮು, ಗಂಡಸಿ ನಾಗರಾಜ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್‌ತೇಜಸ್ವಿ, ಮಾಹಿನ್, ಜ್ಯೋತಿ, ಶ್ರೀನಾಥ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡಸಿನಿವಾರ್ತೆ)

ಶಿವರಾಜ್‌‌‌‌‌‌‌‌‌ಗೇಕೆ ಪರಭಾಷಾ ನಾಯಕಿಯರ ಮೋಹ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada