ಚಿತ್ರದಲ್ಲಿ ರಜನಿಕಾಂತ್ ಅನುಕರಣೆ ಇರಲ್ಲ, ವಿಜಯ್

By Rajendra

ದುನಿಯಾ ವಿಜಯ್ ದ್ವಿಪಾತ್ರಾಭಿನಯದ ರಜನಿಕಾಂತ ಚಿತ್ರ ಸೆಟ್ಟೇರಿದೆ. ಕೊಬ್ರಿ ಮಂಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಪ್ರದೀಪ್ ರಾಜ್. ವಿಶೇಷ ಎಂದರೆ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಗೆಳೆಯ ರಾಜ್ ಬಹದ್ದೂರ್. ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಹಲವು ಗಣ್ಯರ ಸಮ್ಮುಖದಲ್ಲಿ ಸೆಟ್ಟೇರಿತು.

ಈ ಸಂದರ್ಭದಲ್ಲಿ ಕೆ ಮಂಜು ಮಾತನಾಡುತ್ತಾ, ಚಿತ್ರದಲ್ಲಿ ರಜನಿ ಮತ್ತು ಕಾಂತ ಎಂಬ ಎರಡು ಪಾತ್ರಗಳನ್ನು ವಿಜಯ್ ಪೋಷಿಸಲಿದ್ದಾರೆ. ರಜನಿಕಾಂತ್ ಅವರ ಗೆಳೆಯ ರಾಜ್ ಬಹದ್ದೂರು ಅವರು ಈಗಾಗಲೆ ಚಿತ್ರದ ಶೀರ್ಷಿಕೆ ಬಗ್ಗೆ ಅವರಿಗೆ ತಿಳಿಸಿದ್ದಾರೆ. ಇದನ್ನು ಕೇಳಿ ರಜನಿಕಾಂತ್ ತುಂಬ ಸಂತಸ ವ್ಯಕ್ತಪಡಿಸಿದರಂತೆ.

ದುನಿಯಾ ವಿಜಯ್ ಅವರ ಮಾಸ್ ಇಮೇಜನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ ಎಂದು ಮಂಜು ಹೇಳಿದರು. ಚಿತ್ರದ ನಾಯಕಿ ಆಯ್ಕೆ ನಡೆಯುತ್ತಿದೆ. ಪಾತ್ರವರ್ಗದಲ್ಲಿ ಬುಲೆಟ್ ಪ್ರಕಾಶ್ ಗಮನಾರ್ಹ ಪಾತ್ರವನ್ನು ಪೋಷಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ದ್ವಿಪಾತ್ರವನ್ನು ಪೋಷಿಸುತ್ತಿದ್ದೇನೆ. ಚಿತ್ರಕ್ಕೆ ರಜನಿ ಸಾರ್ ಅವರ ಹೆಸರನ್ನು ಬಳಸಿಕೊಂಡಿದ್ದೇವೆ. ಆದರೆ ಎಲ್ಲೂ ಅವರ ಅನುಕರಣೆ ಇರಲ್ಲ. ರಜನಿಕಾಂತ್ ಅವರ ಅತಿದೊಡ್ಡ ಅಭಿಮಾನು ನಾನು. ಅವರ ಹೆಸರಿನ ಶೀರ್ಷಿಕೆಯಲ್ಲಿ ಅಭಿನಯಿಸುತ್ತಿರುವುದು ನನಗೆ ನಿಜಕ್ಕೂ ಖುಷಿ ಕೊಡುತ್ತಿದೆ ಎಂದರು ನಾಯಕ ನಟ ದುನಿಯಾ ವಿಜಯ್.

ನಾಲ್ಕು ವರ್ಷಗಳ ಹಿಂದೆಯೇ ಕತೆ ರೂಪಗೊಂಡಿತ್ತು. ಕೊನೆಯದಾಗಿ ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಾಗ ದುನಿಯಾ ವಿಜಯ್ ಅವರೇ ಈ ಪಾತ್ರಕ್ಕೆ ಸೂಕ್ತ ಅನ್ನಿಸಿದರು. ಚಿತ್ರಕತೆ ಬಗ್ಗೆ ಒಮ್ಮೆ ವಿಜಯ್ ಬಳಿ ಮಾತನಾಡಿದಾಗ ಅವರು ಕೂಡಲೆ ಒಪ್ಪಿದರು. ಇದೊಂದು ರೀತಿ ವಿಭಿನ್ನ ಕಮರ್ಷಿಯಲ್ ಚಿತ್ರ. ವಿಜಯ್ ಅವರ ಒಂದು ಪಾತ್ರದಲ್ಲಿ ಅವರು ಕಾಣಿಸುವುದಿಲ್ಲ. ಇದಕ್ಕಿಂತಲೂ ಹೆಚ್ಚಿಗೆ ಏನೂ ಹೇಳಲು ನಾನು ಇಚ್ಛಿಸುವುದಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್. (ಒನ್‌ಇಂಡಿಯಾ ಕನ್ನಡ)

More from Filmibeat

English summary
Duniya Vijay lead Kannada movie Rajani Kantha launched at Kanteerava Studios. The film to be produced by K.Manju and directed by Pradeep Raj. Vijay is playing a double role in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X