ಗೋಲ್ಡನ್ ಸ್ಟಾರ್ ಗಣೇಶನ ಹಣೆಬರಹ 'ಶೈಲೂ'

Ganesh Bhama
ಸತತ ಒಂಬತ್ತು ಚಿತ್ರಗಳ ಸೋಲಿನ ಸರದಾರ ಗೋಲ್ಡನ್ ಸ್ಟಾರ್ ಗಣೇಶ್ ಗೆ ಬಿಡುಗಡೆಯ ಕ್ಷಣ ಸಮೀಪಿಸಿರುವ 'ಶೈಲೂ' ನಿಜವಾದ ಅಗ್ನಿ ಪರೀಕ್ಷೆ. ಜೊತೆಗೆ ಸೋಲಿನ ಸುಳಿಯಲ್ಲಿ ಸಿಕ್ಕಿರುವ ನಿರ್ದೆಶಕ ಎಸ್ ನಾರಾಯಣ್ ಕೂಡ ಉಸಿರು ಬಿಗಿಹಿಡಿದು ಕೂತಿದ್ದಾರೆ. ಕಾರಣ ಮಗ ಪಂಕಜ್ ನನ್ನು ಮೇಲೆತ್ತಲು ಹೋಗಿ ಅವರಪ್ಪ ನಾರಾಯಣ್ ಈಗ ಪಾತಾಳ ಮುಟ್ಟಿದ್ದಾರೆ.

ಚೆಲುವಿನ ಚಿತ್ತಾರದ ನಂತರ ಗಣೇಶ್ ಮತ್ತು ಎಸ್ ನಾರಾಯಣ್ ಜೋಡಿ ಈ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಅಮೂಲ್ಯ ಬದಲು ನಾಯಕಿಯಾಗಿ 'ಮೊದಲಾ ಸಲ' ಖ್ಯಾತಿಯ 'ಭಾಮಾ' ಇದ್ದಾರೆ. ಮಲೆಯಾಳಂ ಚಿತ್ರ 'ಮೈನಾ' ದ ರೀಮೇಕ್ ಈ ಶೈಲೂ. ಅಲ್ಲಿ ಸೂಪರ್ ಹಿಟ್ ಆಗಿದ್ದ ಚಿತ್ರವನ್ನು ನಾರಾಯಣ್ ಹಾಗೂ ಗಣೇಶ್ ಜೋಡಿ ಇಲ್ಲಿ ಹೇಗೆ ಮಾಡಿದ್ದಾರೆ ಎಂಬುದು ಎಲ್ಲರ ಕುತೂಹಲ.

ಕನ್ನಡದ ಪ್ರೇಕ್ಷಕರು ಶೈಲೂ ಚಿತ್ರವನ್ನು ಮೆಚ್ಚಿದರೆ ಗಣೇಶ್ ಮತ್ತು ನಾರಾಯಣ್ ಇಬ್ಬರಿಗೂ ಪುನರ್ಜನ್ಮ. ಗಣೇಶ್ ಕೈನಲ್ಲಿ ಇದಲ್ಲದೇ ಸಾಕಷ್ಟು ಚಿತ್ರಗಳಿದ್ದರೂ ಈ ಚಿತ್ರಕ್ಕೆ ನಿರೀಕ್ಷೆ ಜಾಸ್ತಿ ಇದೆ. ಇನ್ನೇನು ಬಿಡುಗಡೆಯ ಕ್ಷಣ ಸಮೀಪಿಸಿದೆ. ಇಬ್ಬರ ಫಲಿತಾಂಶದ ಪ್ರಕಟಣೆ ಪ್ರೇಕ್ಷಕರ ಕೈಯಲ್ಲಿದೆ. ಚಿತ್ರ ಗೆದ್ದರೆ ಗೆಲುವಿನ ಚಿತ್ತಾರ, ಸೋತರೆ ಸೋಲಿನ ಸರದಾರ. (ಒನ್ ಇಂಡಿಯಾ ಕನ್ನಡ)

More from Filmibeat

English summary
Expected Kannada movie 'Shailoo' releasing tomorrow (Dec. 09, 2011) all over Karnataka. This is the real Test for both S Narayan and golden star Ganesh. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X