ವಿಷ್ಣುವರ್ಧನ್ ಚಿತ್ರದಲ್ಲೊಂದು 'ಚತುರತೆ' ತುಣುಕು

ಅನಿವಾರ್ಯತೆಯಲ್ಲಿ ನಾಯಕ ಎಲ್ಲರಂತೆ ದೇವರನ್ನು ನೆನಪಿಸಿಕೊಂಡು ಅಲ್ಲೇ ಪಕ್ಕದಲ್ಲಿದ್ದ ಪ್ರತಿಮೆಯ ಬಳಿ ಹೋಗಿ ಕೈ ಮುಗಿದು ನಿಲ್ಲುತ್ತಾನೆ. ಅಲ್ಲೂ ಕೂಡ ತಕ್ಷಣ ಆತನ ಬುದ್ಧಿವಂತಿಕೆಯೇ ಕೆಲಸ ಮಾಡುತ್ತದೆ. ದೇವರ ಪ್ರತಿಮೆಯ ಪಕ್ಕದಲ್ಲಿ ಹಚ್ಚಿಟ್ಟಿದ್ದ ಸಾಂಬ್ರಾಣಿ ಕಣ್ಣಿಗೆ ಬೀಳುತ್ತದೆ. ಜೊತೆಗೆ ಆಗ ಡ್ಯೂಟಿಯಲ್ಲಿದ್ದ ಡಾಕ್ಟರ್ ಹೇಳಿದ "ಮಗು ತಾನಾಗೇ ಕಾಲನ್ನು ಒಳಕ್ಕೆ ಎಳೆದುಕೊಂಡರೆ ಇಬ್ಬರ ಪ್ರಾಣವೂ ಉಳಿಯುತ್ತದೆ" ಎಂಬ ಮಾತು ನೆನಪಿಗೆ ಬರುತ್ತದೆ.
ತಕ್ಷಣ ಉರಿಯುತ್ತಿದ್ದ ಸಾಂಬ್ರಾಣಿಯನ್ನು ಗರ್ಭಿಣಿಯ ಹೊಟ್ಟೆಯ ಬಳಿ ಹಿಡಿಯುತ್ತಾನೆ. ಆ ಶಾಖಕ್ಕೆ ಮಗು ತನ್ನ ಕಾಲನ್ನು ತಾನಾಗೇ ಒಳಕ್ಕೆ ತೆಗೆದುಕೊಳ್ಳುತ್ತದೆ. ಈ ರೀತಿ ನಂಬಿಕೆ ಹಾಗೂ ಮೂಢನಂಬಿಕೆಯ ಮಧ್ಯೆ ಇರುವ ಸೂಕ್ಷವನ್ನು ವೈಜ್ಞಾನಿಕ ಹಾಗೂ ಸಮಯಪ್ರಜ್ಞೆಯ ಜೊತೆ ಸೇರಿಸಿ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಹಾಗೂ ನಂತರ ಸಮಾಧಾನದ ನಿಟ್ಟುಸಿರು ಬಿಡುವಂತೆ ನಿರೂಪಿಸಲಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Dwarakish produced, Sudeep movie 'Vishnuvardhana' released all over Karanataka in 120 centers. This is one master piece of the movie.


Click it and Unblock the Notifications











